ಅಲಿಗಢ್ ಶಾಲಾ ಆವರಣಕ್ಕೆ ನುಗ್ಗಿದ ಚಿರತೆ:
ವಿದ್ಯಾರ್ಥಿಯ ಮೇಲೆ ದಾಳಿ
ಉತ್ತರ ಪ್ರದೇಶ: ಅಲಿಗಢ್‌ನಲ್ಲಿರುವ ಶಾಲೆಯೊಂದರಲ್ಲಿ ಚಿರತೆಯೊಂದು ತರಗತಿಗೆ ನುಗ್ಗಿದೆ. ಕಾಡು ಚಿರತೆಯು 15 ವರ್ಷದ ದಾಳಿ ಮಾಡಿದ್ದು, ವಿದ್ಯಾರ್ಥಿಗೆ ಗಾಯಗಳಾಗಿವೆ.


ಬೆಳಗ್ಗೆ 8:30ರ ಸುಮಾರಿಗೆ ಈ ಘಟನೆ ನಡೆದಿದೆ. ದಾಳಿಗೊಳಗಾದ ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿರತೆಯು ಕ್ಯಾಂಪಸ್‌ನಲ್ಲಿ ಉಳಿದುಕೊಂಡಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಮನೆಗೆ ಹಿಂತಿರುಗುವಂತೆ ಹೇಳಲಾಯಿತು. ಒಂಬತ್ತು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ನಂತರ ಚಿರತೆಯನ್ನು ಅಂತಿಮವಾಗಿ ಎನ್‌ಜಿಒ, ವನ್ಯಜೀವಿ ಎಸ್‌ಒಎಸ್ ಸಹಾಯದಿಂದ ರಕ್ಷಿಸಲಾಯಿತು.





