July 27, 2024

ಭಾರತವನ್ನು ಮಣಿಸಿ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

0

ಅಹ್ಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದುಕೊಂಡಿದೆ.

ಭಾರತ ನೀಡಿದ್ದ 241 ರನ್​ಗಳ ಸಾಧಾರಣ ಗುರಿಯನ್ನು ಆಸೀಸ್​ 7 ಓವರ್​ ಉಳಿಸಿಕೊಂಡು 6 ವಿಕೆಟ್​ನಿಂದ ಗೆದ್ದುಕೊಂಡಿದೆ. 2003ರಲ್ಲಿ ಆಸೀಸ್​ ವಿರುದ್ಧ ಸೋಲು ಕಂಡಿದ್ದ ಭಾರತ 20 ವರ್ಷದ ನಂತರ ಅಂದರೆ, 2023 ವಿಶ್ವಕಪ್​ನಲ್ಲೂ ಸೋಲು ಕಂಡಿತು.

2003 ವಿಶ್ವಕಪ್​​ನಲ್ಲಿ ರಿಕಿ ಪಾಂಟಿಂಗ್​ 140 ರನ್​ ಗಳಿಸಿ ಭಾರತದ ಸೋಲಿಗೆ ಕಾರಣರಾದರೆ, 2023ರ ವಿಶ್ವಕಪ್​ನಲ್ಲಿ ಟ್ರಾವಿಸ್ ಹೆಡ್ ಭಾರತಕ್ಕೆ ಮುಳುವಾದರು. ಚೊಚ್ಚಲ ವಿಶ್ವಕಪ್​ ಫೈನಲ್​ಗೆ ಪ್ರವೇಶಿಸಿ ವೆಸ್ಟ್​ ಇಂಡೀಸ್​ ವಿರುದ್ಧ ಸೋಲು ಕಂಡಿದ್ದ ಆಸ್ಟ್ರೇಲಿಯಾ ಮತ್ತೆಂದು ಫೈನಲ್​ ಹಂತಕ್ಕೆ ಬಂದು ಎಡವಿಲ್ಲ. 1975ರ ನಂತರ 6 ಬಾರಿ ಫೈನಲ್​ ಪ್ರವೇಶಿಸಿದ ಕಾಂಗರೂ ಪಡೆ ಪ್ರತಿ ಬಾರಿಯೂ ಚಾಂಪಿಯನ್​ ಆಗಿದೆ.ವಿಶ್ವಕಪ್​ನ ಲೀಗ್​ ಮತ್ತು ಸೆಮೀಸ್​ ಸೇರಿ ಹತ್ತು ಪಂದ್ಯಗಳನ್ನು ಗೆದ್ದು ಫೈನಲ್​ ಪ್ರವೇಶಿಸಿದ್ದ ಭಾರತ ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ತಂಡ ವಿರಾಟ್​ ಕೊಹ್ಲಿ (54), ಕೆ ಎಲ್​ ರಾಹುಲ್​ (66) ಅರ್ಧಶತಕ ಮತ್ತು ನಾಯಕ ರೋಹಿತ್​ ಶರ್ಮಾ ಅವರ 47 ರನ್​ಗಳ ಕೊಡುಗೆ ಇಂದ 50 ಓವರ್​ ಅಂತ್ಯಕ್ಕೆ ಎಲ್ಲಾ ವಿಕೆಟ್​ ಗಳನ್ನು ಕಳೆದುಕೊಂಡು 240 ಮೊತ್ತವನ್ನು ಕಲೆಹಾಕಿತ್ತು.

241 ರನ್​ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ಆರಂಭದಲ್ಲಿ ಭಾರತದ ಬೌಲರ್​ಗಳು ಬಿಗಿ ದಾಳಿ ಮಾಡಿದರು. ಇದರಿಂದ ಮೂರು ವಿಕೆಟ್ ಆಸ್ಟ್ರೇಲಿಯಾ ಕಳೆದುಕೊಂಡಿತು. ಆದರೆ ನಂತರ ನಾಲ್ಕನೇ ವಿಕೆಟ್​ಗೆ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್ ಅವರಿಂದ ಬಂದ 192 ರನ್​ಗಳ ಪಾಲುದಾರಿಕೆ ಭಾರತಕ್ಕೆ 7 ವಿಕೆಟ್​​ಗಳ ಸೋಲಿಗೆ ಕಾರಣವಾಯಿತು.

ಎರಡನೇ ಓವರ್​ನಲ್ಲಿ ಮೊಹಮ್ಮದ್​ ಶಮಿ ಡೇವಿಡ್​ ವಾರ್ನರ್​ (7) ವಿಕೆಟ್​ ಪಡೆದರು. ಅವರ ಬೆನ್ನಲ್ಲೇ ಮಿಚೆಲ್ ಮಾರ್ಷ್ (15) ಮತ್ತು ಸ್ಟೀವನ್ ಸ್ಮಿತ್ (4) ವಿಕೆಟ್​ ಉರುಳಿತು. ಶಮಿ 1 ವಿಕೆಟ್​ ಪಡೆದರೆ, ಬುಮ್ರಾ 2 ವಿಕೆಟ್​ ಕಬಳಿಸಿದರು. ಆದರೆ ನಂತರ ಭಾರತದ ಯಾವುದೇ ಬೌಲರ್​ ಆಸಿಸ್ ವಿಕೆಟ್​ ಕಬಳಿಸುವಲ್ಲಿ ಯಶಸ್ವಿ ಆಗಲಿಲ್ಲ.

47ಕ್ಕೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾಕ್ಕೆ 192 ರನ್​ಗಳ ಪಾಲುದಾರಿಕೆಯನ್ನು ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್ ಮಾಡಿದರು. ಈ ಜೊತೆಯಾಟವನ್ನು ಮುರಿಯುವಲ್ಲಿ ಟೀಮ್​ ಇಂಡಿಯಾದ ಬೌಲರ್​ಗಳು ಯಶಸ್ವಿಯಾಗಲಿಲ್ಲ.

Leave a Reply

Your email address will not be published. Required fields are marked *

error: Content is protected !!