December 23, 2024

ಮಂಗಳೂರು: ಅಕ್ರಮ ಚಿನ್ನ ಸಾಗಾಟ: ಲಕ್ಷಾಂತರ ಮೌಲ್ಯದ ಚಿನ್ನ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ

0


 
ಮಂಗಳೂರು: ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 322 ಗ್ರಾಂ ಮತ್ತು 857 ಗ್ರಾಂ ತೂಕದ ಚಿನ್ನದ ವಸ್ತುಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.

ನ.9 ಮತ್ತುನ.13 ರಂದು ಇಂಡಿಗೋ ಫ್ಲೈಟ್ 6E1163 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX814 ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಬ್ಬರನ್ನು ತಡೆದು ಪರಿಶೀಲನೆ ನಡೆಸಿದ ವೇಳೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಈ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ 21.6/24 ಕ್ಯಾರೆಟ್ ಚಿನ್ನವನ್ನು ಟ್ರಾಲಿ ಬ್ಯಾಗ್‌ನಲ್ಲಿ ಮಣಿ ಹಾಕುವ ರಾಡ್‌ಗಳ ರೂಪದಲ್ಲಿ, ವಾಚ್, ಬಾಲ್-ಪಾಯಿಂಟ್ ಪೆನ್, ಹೇರ್ ಟ್ರಿಮ್ಮರ್, ಸ್ಟೀಲ್ ವೂಲ್ ಸ್ಕ್ರಬರ್ ಮತ್ತು ಒಂದು ರೋಡಿಯಂ ಲೇಪಿತ ನಾಣ್ಯದ ರೂಪದಲ್ಲಿ ಪತ್ತೆಹಚ್ಚಲಾಗಿದೆ.ಅಧಿಕಾರಿಗಳು ಒಟ್ಟು 322 ಗ್ರಾಂ ತೂಕದ 18,17,718 ರೂ. ಮೌಲ್ಯದ ಚಿನ್ನದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

 

 

ನವೆಂಬರ್ 18ರಂದು ಅಧಿಕಾರಿಗಳು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX 814 ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಚೆಕ್-ಇನ್ ಬ್ಯಾಗೇಜ್ ತಪಾಸಣೆ ಮಾಡಲಾಗಿತ್ತು.

ಈ ವೇಳೆ ಕೆಲವು ಕಪ್ಪು ಚಿತ್ರಗಳು ಭಾರೀ ಲೋಹದ ಇರುವಿಕೆಯನ್ನು ಸೂಚಿಸುವ ವಸ್ತುಗಳು ಕಂಡುಬಂದಿದ್ದು, ಪರಿಶೀಲನೆ ನಡೆಸಿದಾಗ ಎರಡು ಕಾರ್ ಸ್ಪೀಕರ್‌ ಗಳಲ್ಲಿ 2 ವೃತ್ತಾಕಾರದ ತುಂಡುಗಳು, ಏರ್‌ಪಾಡ್‌ ನಲ್ಲಿ 2 ಆಯತಾಕಾರದ ಕಟ್ ತುಂಡುಗಳು ಮತ್ತು ಪವರ್ ಅಡಾಪ್ಟರ್‌ ನಲ್ಲಿ ಒಂದು ಆಯತಾಕಾರದ ತುಂಡು ಚಿನ್ನ ಪತ್ತೆಯಾಗಿದೆ.

51,84,850 ರೂ ಮೌಲ್ಯದ 24 ಕ್ಯಾರೆಟ್ ನ 857 ಗ್ರಾಂ ತೂಕದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಆರೋಪಿಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!