ಉಡುಪಿ: ರೈಲ್ವೇ ಸೇತುವೆಯಲ್ಲಿ ಸಿಲುಕಿದ ಹಸುವಿನ ರಕ್ಷಣೆ
ಉಡುಪಿ: ಆಹಾರವನ್ನು ಹುಡುಕಿಕೊಂಡು ಹೋಗಿ ರೈಲ್ವೆ ಸೇತುವೆ ಮೇಲ್ಭಾಗದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ ಹಸುವನ್ನು ಕಾರ್ಯಾಚರಣೆ ಮಾಡಿ ರಕ್ಷಿಸಲಾಗಿದೆ.
ಬೈಂದೂರು-ಬೀಜೂರು ಮಧ್ಯದಲ್ಲಿ ಸಿಗುವ ರೈಲ್ವೆ ಸೇತುವೆಯಲ್ಲಿ ಈ ಘಟನೆ ನಡೆದಿದೆ. ಹುಲ್ಲು ಮೇಯುತ್ತಾ ರೈಲ್ವೆ ಬ್ರಿಜ್ ಮೇಲೆ ಸಿಲುಕಿ ಕೊಂಡ ಹಸುವನ್ನು ಮಧ್ಯಾಹ್ನದ ವೇಳೆಗೆ ಕಂಡ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳೀಯ ಸಮಾಜ ಸೇವಕ ಸುಬ್ರಹ್ಮಣ್ಯ ಬೀಜೂರು ನೇತೃತ್ವದಲ್ಲಿ ರಕ್ಷಣೆಗೆ ಯತ್ನ ಮಾಡಲಾಗಿದೆ.
ಇದೇ ವೇಳೆ ಸ್ಥಳಕ್ಕೆ ಬಂದ ಬೈಂದೂರು ಅಗ್ನಿಶಾಮಕ ದಳದವರಿಂದ ಹಸುವಿನ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ. ಸುಮಾರು ಅರ್ಧ ಗಂಟೆಗಳ ಕಾರ್ಯಾಚರಣೆ ಬಳಿಕ ಹಸುವನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿ ಕೆಳಕ್ಕೆ ಇಳಿಸಿದ್ದಾರೆ.