February 20, 2026

ಉಡುಪಿ: ತೆರೆದ ಬಾವಿಗೆ ಬಿದ್ದು ಚಿರತೆ ಸಾವು

0
IMG-20231115-WA0051.jpg

ಉಡುಪಿ: ಉಡುಪಿಯ ಕುಂಜಾರುಗಿರಿಯಲ್ಲಿ ಚಿರತೆಯೊಂದು ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಕಟಪಾಡಿಯ ಕುಂಜಾರುಗಿರಿಯ ಸಂಕತೀರ್ಥ ಎಂಬಲ್ಲಿ ರಾತ್ರಿ ವೇಳೆ ತೆರೆದ ಬಾವಿಗೆ ಚಿರತೆ ಬಿದ್ದಿದ್ದು, ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಇಲಾಖೆಯ ಸಿಬ್ಬಂದಿ ಚಿರತೆಯನ್ನು ರಕ್ಷಿಸಲು ಪ್ರಯತ್ನಿಸಿ ಚಿರತೆ ರಕ್ಷಣೆಗೆ ಸರಿಯಾದ ಸಲಕರಣೆಗಳು ಇಲ್ಲದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ.

ಇನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ಪ್ರಾಣವನ್ನು ರಕ್ಷಿಸಲು ಹರಸಾಸ ಪಟ್ಟ ಚಿರತೆ, ಕೊನೆಗೂ ತನ್ನ ಜೀವವನ್ನು ರಕ್ಷಿಸಿಕೊಳ್ಳಲು ಆಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!