ಮನೆಯ ಮುಂಭಾಗದಲ್ಲಿ ಪಟಾಕಿ ಸಿಡಿದು ಯುವಕ ಸಾವು
ತರೀಕೆರೆ: ತಾಲ್ಲೂಕಿನ ಸುಣ್ಣದಹಳ್ಳಿ ಗ್ರಾಮದಲ್ಲಿ ತಡರಾತ್ರಿ ಪಟಾಕಿ ಸಿಡಿದು ಪ್ರದೀಪ್(30) ಮೃತಪಟ್ಟಿದ್ದಾರೆ.
ಮಂಗಳವಾರ ರಾತ್ರಿ ಮನೆಯ ಮುಂದೆ ಪಟಾಕಿ ಹಚ್ಚುತ್ತಿದ್ದಾಗ ಪಟಾಕಿ ಕಿಡಿಯೊಂದು ಪಟಾಕಿ ಇದ್ದ ಬಾಕ್ಸ್ ಗೆ ಸಿಡಿದಿದೆ.
ಆಗ ಇಡೀ ಬಾಕ್ಸ್ ಗೆ ಹೊತ್ತಿಕೊಂಡಿದೆ. ಪಕ್ಕದಲ್ಲೇ ಇದ್ದ ಪ್ರದೀಪ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತು. ಅದರೆ, ಅವರು ಬದುಕುಳಿಯಲಿಲ್ಲ.
ಪ್ರದೀಪ್ ಅಣ್ಣನ ಮಗ ಕುಶಲ್(12), ಪಕ್ಕದ ಮನೆಯ ದರ್ಶನ್ (19), ಷಣ್ಮುಖ(12) ಅವರಿಗೆ ಗಾಯಗಳಾಗಿವೆ.
ಪಟಾಕಿ ಸಿಡಿದ ರಭಸಕ್ಕೆ ಸಮೀಪದ ಮನೆಯ ಸೀಟ್ ಹಾಗೂ ಗೋಡೆಗಳಿಗೂ ಹಾನಿಯಾಗಿದೆ.





