February 19, 2026

ಬೆಳ್ತಂಗಡಿ: ಚೆಂಡಿನಂತಹ ವಸ್ತು ಸ್ಫೋಟಗೊಂಡು ಬಾಲಕನಿಗೆ ಗಾಯ

0
image_editor_output_image-1545388239-1771518142553.jpg

ಬೆಳ್ತಂಗಡಿ : ತಾಲ್ಲೂಕಿನ ಬಂದಾರು ಗ್ರಾಮದಲ್ಲಿ ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಚೆಂಡಿನಂತಹ ವಸ್ತುವೊಂದು ಬುಧವಾರ ಸಂಜೆ ಸ್ಫೋಟಗೊಂಡು ಬಾಲಕನೊಬ್ಬ ಗಾಯಗೊಂಡಿದ್ದಾನೆ.

ಬಂದಾರು ಗ್ರಾಮದ ಬಲಿಪೆ ನಿವಾಸಿ ಮುಕುಂದ ಮತ್ತು ಜಯಶ್ರೀ ದಂಪತಿಯ ಪುತ್ರ ಅಭೀಶ್ (11) ಗಾಯಗೊಂಡಿರುವ ಬಾಲಕ. ಅಂಗಳದಲ್ಲಿ ಮಕ್ಕಳಿಬ್ಬರು ಆಟವಾಡುತ್ತಿದ್ದ ವೇಳೆ ಚೆಂಡಿನಂಥ ವಸ್ತುವೊಂದು ಅವರಿಗೆ ಸಿಕ್ಕಿತ್ತು. ಬಾಲಕರಿಬ್ಬರು ಅದನ್ನು ಹೆಕ್ಕಿಕೊಂಡು ಬಂದಿದ್ದರು. ಅದನ್ನು ಬಳಸಿ ಕ್ರಿಕೆಟ್ ಆಟವಾಡಿದ್ದರು. ಒಬ್ಬ ಬಾಲಕ ಅದನ್ನು ಬಳಸಿ ಬೌಲಿಂಗ್ ಮಾಡಿದ್ದು, ಅಭೀಶ್ ಬ್ಯಾಟ್ ನಿಂದ ಬಾರಿಸಿದ್ದ. ಈ ವೇಳೆ ಅದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬಾಲಕ ಅಭೀಶ್ ಮೈಯಲ್ಲಿ ಅಲ್ಲಲ್ಲಿ ಗಾಯಗಳಾಗಿವೆ. ಗಾಯಗೊಂಡ ಬಾಲಕನನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೂರಿನ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲಿ ಅ.ಕ್ರ: 09/2026, ಕಲಂ: 9(B)(1)(b) explosive Avt 1884 And 125(A) ಬಿಎನ್ಎಸ್-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!