February 19, 2026

ಪುತ್ತೂರು: ಮಹೀಂದ್ರ ಥಾರ್ ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಮ್ ಸಾಗಾಟ: ಕೇರಳ ಮೂಲದ ಮೂವರು ಆರೋಪಿಗಳ ಬಂಧನ

0
image_editor_output_image-1544464718-1771518286467.jpg

ಪುತ್ತೂರು: ಮಹೀಂದ್ರ ಥಾರ್ ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಮ್ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ ಸಂಪ್ಯ ಗ್ರಾಮಾಂತರ ಪೊಲೀಸರು ಕೇರಳ ಮೂಲದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಎಂಡಿಎಂ ಮತ್ತು ಒಂದು ತಲುವಾರು ಅನ್ನು ಸ್ವಾಧೀನ ಪಡೆಸಿಕೊಂಡ ಘಟನೆ ಫೆ. 18ರಂದು ನಡೆದಿದೆ.

ಕೇರಳ ಮೂಲದ ಕೋಜಿಕೋಡ್ ಪೆರುವಾಯಲ್‌ನ ಮುಹಮ್ಮದ್ ಅಜ್ಮಲ್ ಸಿ(30ವ), ವಯನಾಡ್ ನಿವಾಸಿ ಇಸ್ಮಾಯಿಲ್(28ವ), ಕೋಜಿಕೋಡ್ ಕೊಯಿಲಾಡಿ ನಿವಾಸಿ ಸಂಶೀರ್(27ವ) ಅವರು ಬಂಧಿತ ಆರೋಪಿಗಳು. ಅವರಿಂದ 55 ಗ್ರಾಂ ಎಂಡಿಎಂ ಮತ್ತು ಒಂದು ತಲುವಾರು ಅನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಗುಣಪಾಲ ಜೆ ಅವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಮಾಹಿತಿ ಮೇರೆಗೆ ಒಳಮೊಗ್ರು ಗ್ರಾಮದ ಪರ್ಪುಂಜ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿರುವಾಗ ಪುತ್ತೂರು ಕಡೆಯಿಂದ ಕಪ್ಪು ಬಣ್ಣದ ಕೆ.ಎಲ್. ನೋಂದಾವಣೆಯ ಮಹೀಂದ್ರ ಥಾರ್ ಕಾರ್ ಬರುತ್ತಿದ್ದನ್ನು ಸಿಬ್ಬಂದಿಗಳ ಸಹಾಯದಿಂದ ತಡೆದು ನಿಲ್ಲಿಸಿದ್ದಾರೆ.

ಈ ವೇಳೆ ಕಾರಿನ ಚಾಲಕ ಮತ್ತು ಅದರಲ್ಲಿದ್ದ 2 ಜನರು ಇಳಿದು ಓಡಿ ಹೋಗಲು ಪ್ರಯತ್ನಿಸಿದವರನ್ನು ಸಿಬ್ಬಂದಿಗಳೊಂದಿಗೆ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಆರೋಪಿಗಳ ಪೈಕಿ ಮುಹಮ್ಮದ್ ಅಜ್ಮಲ್ ಪೊಲೀಸರಿಂದ ತಪಿಸಿ ಪರಾರಿಯಾಗಲು ಯತ್ನಿಸಿದ್ದಾರೆ.

ಆದರೆ ಆತನನ್ನು ಪೊಲೀಸರು ತಪ್ಪಿಸಲು ಬಿಡದೆ ವಿಚಾರಿಸಿದಾಗ ಎಮ್‌ಡಿಎಂ ಮಾರಾಟಕ್ಕೆ ತೆರಳುವುದಾಗಿ ತಿಳಿಸಿದ್ದಾರೆ. ಪೊಲೀಸರು ಕಾರನ್ನು ಪರಿಶೀಲಿಸಿದಾಗ ಚಾಲಕನ ಸೀಟ್‌ನ ಅಡಿಯಲ್ಲಿ ಒಂದು ತಲವಾರು ಪತ್ತೆಯಾಗಿತ್ತು. ಈ ಕುರಿತು ಚಾಲಕ ಇಸ್ಮಾಯಿಲ್ ಅವರನ್ನು ವಿಚಾರಿಸಿದಾಗ ‘ತಾವು ಎಂಡಿಎಂ ಅನ್ನು ಮಾರಾಟ ಮಾಡುವ ಸಚಿದರ್ಭದಲ್ಲಿ ತಮ್ಮ ರಕ್ಷಣೆಗಾಗಿ ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ.

ನಿಷೇದಿತ ಮಾದಕ ವಸ್ತುವಾದ ಎಂಡಿಎಂ ಮತ್ತು ತಲವಾರನ್ನು ಸ್ವಾಧೀನ ಹೊಂದಿ, ನಿಷೇದಿತ ಮಾದಕ ವಸ್ತುವಾದ ಎಂಡಿಎಂ ಅನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಆರೋಪಿಗಳ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆ ಕಲಂ: 8C, 22(C), 29 NDPS Act 1985 & PÀ®A: 25(1B)(B) Arms Act. ಯಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!