ನಟಿ ಮೌಶುಮಿಯನ್ನು ಬಂಧಿಸಿದ ಪೊಲೀಸರು
ದಿಲ್ಲಿ: ಒರಿಯಾ ನಟಿ ಮೌಶುಮಿ ನಾಯಕ್ ಲೇಖಕಿಯೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ತಂದಿದ್ದನ್ನು ಸ್ವತಃ ನಟಿ ಒಪ್ಪಿಕೊಂಡಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.
ಒರಿಯಾ ಸಿನಿಮಾ ರಂಗದಲ್ಲಿ ಅತ್ಯಂತ ಜನಪ್ರಿಯ ನಟಿ ಮೌಶುಮಿ ನಾಯಕ್, ದುಡ್ಡಿನ ವಿಚಾರದಲ್ಲಿ ಲೇಖಕಿ ಬನಸ್ಮಿತಾ ಅವರ ಮಾನಹಾನಿ ಮಾಡಿದ್ದರಂತೆ.
ಜೊತೆಗೆ ಲೇಖಕಿ ಪತಿಯ ವಿರುದ್ಧ ಚಂದಕಾ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ಕೂಡ ನೀಡಿದ್ದರಂತೆ. ಆನಂತರ ಲೇಖಕಿ ಹಾಗೂ ನಟಿ ರಾಜಿ ಮಾಡಿಕೊಂಡಿದ್ದಾರೆ.
ಇದಾದ ನಂತರವೂ ನಿರಂತರವಾಗಿ ನಟಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಲೇಖಕಿ ದೂರು ನೀಡಿದ್ದರು.





