ಜೆಡಿಎಸ್ ಕಚೇರಿ ಮುಂದೆ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಎಂದು ಬರೆದಿರುವ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ಕಾರ್ಯಕರ್ತರು
ಬೆಂಗಳೂರು: ಜೆಡಿಎಸ್ ಕಚೇರಿ ಮುಂದೆ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಎಂದು ಬರೆದಿರುವ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ಕಾರ್ಯಕರ್ತರು ಲೇವಡಿ ಮಾಡಿದ್ದಾರೆ.
ಮಾಜಿ ಸಿಎಂ ವಿರುದ್ಧ ವಿದ್ಯುತ್ ಅಕ್ರಮ ಆರೋಪ ಕೇಳಿ ಬಂದಾಗಿಂದ ಒಂದಲ್ಲ ಒಂದು ರೀತಿಯಲ್ಲಿ ‘ಕೈ’ ಕಾರ್ಯಕರ್ತರು ಕಾಲೆಳೆಯುತ್ತಿದ್ದಾರೆ.
ಹೆಚ್‌ಡಿಕೆ ಫೋಟೋ ಇರುವ ಪೋಸ್ಟರ್‌ನಲ್ಲಿ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಎಂದು ಬರೆಯಲಾಗಿದೆ. 200 ಯೂನಿಟ್ ಉಚಿತ.. ನೆನಪಿಟ್ಟುಕೊಳ್ಳಿ, ಹೆಚ್ಚು ಕದಿಯಬೇಡಿ ಎಂದು ಬರೆದು ಕಾಂಗ್ರೆಸ್ ಕಾರ್ಯಕರ್ತರು ಲೇವಡಿ ಮಾಡಿದ್ದಾರೆ.





