ರಾಯಚೂರು:ಗ್ರಾಹಕನೊಬ್ಬ ಹೊಟೇಲ್ ಮಾಲೀಕನ ಮೇಲೆ ಅಡುಗೆ ಎಣ್ಣೆ ಎರಚಿದ ಪ್ರಕರಣವೊಂದು ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ.
ರಾಯಚೂರಿನ ಮಾನ್ವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗಾಯಾಳು ಹೋಟೆಲ್ ಮಾಲೀಕನನ್ನು ರಂಗಯ್ಯ ಶೆಟ್ಟಿ ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಭೀಮಾ ನಾಯಕ್ ಎಂಬಾತ ಈ ಕೃತ್ಯ ಎಸಗಿದ್ದಾನೆ.