ವಿಟ್ಲ: ಹೊರೈಝನ್ ಶಾಲೆಯಲ್ಲಿ ಮಕ್ಕಳ ಈದ್ ಮೀಲಾದ್ ಕಾರ್ಯಕ್ರಮ
ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ “ಈದ್ ಮಿಲಾದ್ ” ಕಾರ್ಯಕ್ರಮವು ಶಾಲೆಯ ಅಧ್ಯಕ್ಷ ಝುಬೈರ್ ಮಾಸ್ಟರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸದರ್ ಉಮ್ಮರ್ ಸಅದಿ ದುವಾದ ಮೂಲಕ ಕಾರ್ಯಕ್ರಮ ಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ವಿದ್ಯಾರ್ಥಿಗಳ ದಫ್,ಬುರ್ಧಾ,ಖವ್ವಾಲಿ ಆಕರ್ಷಕವಾಗಿದ್ದುವು.
ಶಾಲೆಯ ಸಂಚಾಲಕ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಉಪಾಧ್ಯಕ್ಷ ವಿ.ಕೆ.ಎಂ. ಅಶ್ರಫ್, ಕಾರ್ಯದರ್ಶಿ ನೋಟರಿ ಅಬೂಬಕರ್,ಮೇಲ್ವಿಚಾರಕ ಗಫೂರ್ ಮೇಗಿನಪೇಟೆ, ಲೆಕ್ಕಪರಿಶೋಧಕ ಇಕ್ಬಾಲ್ ಮೇಗಿನಪೇಟೆ, ಟ್ರಸ್ಟಿಗಳಾದ ಅಝೀಝ್ ಸನ,ಇಕ್ಬಾಲ್ ಹಳೆಮನೆ,ಹನೀಫ್ ಎಂ.ಎ,ಅಬ್ದುಲ್ ರಹಿಮಾನ್ ದೀಪಕ್,ಅಬೂಬಕರ್ ಅನಿಲಕಟ್ಟೆ ಮುಂತಾದವರು ವೇದಿಕೆಯಲ್ಲಿದ್ದರು.
ತೀರ್ಪುಗಾರರಾಗಿ ಹಾರಿಸ್ ರಹ್ಮಾನಿ ಹಾಗೂ ಸುಹೈಲ್ ವಾಫಿ ಸಹಕರಿಸಿದರು.
ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಸ್ವಾಗತಿಸಿದರು.
ಮದರಸ ಶಿಕ್ಷಕರಾದ ಅಜ್ಮಲ್ ಫೈಝಿ ವಂದಿಸಿದರು. ಫಾರೂಕ್ ಹನೀಫೀ ಹಾಗೂ ನೌಫಲ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.





