ಮಡಿಕೇರಿ: ಕಾರ್ಮಿಕರು, ಜೀಪಿನ ಮೇಲೆ ಕಾಡಾನೆ ದಾಳಿ
ಮಡಿಕೇರಿ: ಕಾರ್ಮಿಕರು ಹಾಗೂ ಜೀಪಿನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ತಟ್ಟಳ್ಳಿಯಲ್ಲಿ ನಡೆದಿದೆ.
ಕಾರ್ಮಿಕರು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭಕಾಡಾನೆಯೊಂದು ಏಕಾಏಕಿ ದಾಳಿ ಮಾಡಿದೆ.
ಕಾರ್ಮಿಕರು ಭಯಭೀತರಾಗಿ ಓಡುವ ಸಂದರ್ಭ ಕಾರ್ಮಿಕ ಮಹಿಳೆ ಸುನಿತಾ ಎಂಬುವವರು ಬಿದ್ದು ಗಂಭೀರ ಗಾಯಗಳಾಗಿವೆ. ಇವರಿಗೆ ಮಾಲ್ದಾರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.




