ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿನಲ್ಲಿ Excellencia 2023-2024
ವಿಟ್ಲ: ಅನುಗ್ರಹ ಮಹಿಳಾ ಕಾಲೇಜು, ಕಲ್ಲಡ್ಕದಲ್ಲಿ ಅಂತಿಮ ಬಿ.ಎ ಮತ್ತು ಬಿ.ಕಾಂ ವಿದ್ಯಾರ್ಥಿನಿಯರು Excellencia 2023-2024 ಶೀರ್ಷಿಕೆಯಡಿ ಮೂರು ದಿನಗಳ ಸಾಂಸ್ಕೃತಿಕ ಹಬ್ಬವನ್ನು ಏರ್ಪಡಿಸಿದರು. ಪ್ರಥಮ ದಿನದಂದು ಆಹಾರ ಮೇಳವನ್ನು ಆಯೋಜಿಸಲಾಯಿತು. ವಿವಿಧ ರೀತಿಯ ತಿಂಡಿ – ತಿನಿಸುಗಳನ್ನು ವಿದ್ಯಾರ್ಥಿನಿಯರು ತಯಾರಿಸಿ ಪ್ರದರ್ಶಿಸಿದರು. ಎರಡನೇ ದಿನದಂದು ಸಾಂಪ್ರದಾಯಿಕ ದಿನವನ್ನು ಆಚರಿಸುವುದರ ಜೊತೆಗೆ ಎಲ್ಲಾ ವಿದ್ಯಾರ್ಥಿನಿಯರು ಭಾರತೀಯ ಸಂಸ್ಕೃತಿಯ ಉಡುಗೆ- ತೊಡುಗೆಗಳನ್ನು ತೊಟ್ಟು ಸಂಭ್ರಮಿಸಿದರು. ಕಾರ್ಯಕ್ರಮದ ಕೊನೆಗೆ ‘ Traditional Queen’ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ವಿದ್ಯಾರ್ಥಿನಿಗೆ ಬಹುಮಾನವನ್ನು ನೀಡಿ ಪ್ರಶಂಶಿಸಲಾಯಿತು.
ಕಾರ್ಯಕ್ರಮದ ಕೊನೆಯ ದಿನ ನಡೆದ ಸಭಾ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಯಾಗಿ ನಿವೃತ ಮುಖ್ಯ ಶಿಕ್ಷಕ ಮತ್ತು ತರಬೇತುಗಾರ ಶ್ರೀಯುತ ಭಾಸ್ಕರ ಅಡ್ವಾಳ ಕರವೀರ, ಕಲ್ಲಂಗಳ ಆಗಮಿಸಿದ್ದರು.
ಶ್ರೀಯುತರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಿರ್ಮಲ ಪ್ರಕೃತಿಯ ಮಡಿಲಲ್ಲಿ ತಲೆ ಎತ್ತಿ ನಿಂತಿರುವ ಅನುಗ್ರಹ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರು ಖಂಡಿತಾ ಧನ್ಯರು. ಕಲಾ,ವಾಣಿಜ್ಯ ಮತ್ತು ವಿಜ್ಞಾನ ಎಲ್ಲವೂ ಒಂದೇ ತಕ್ಕಡಿಯಲ್ಲಿ ಸಮಾನವಾಗಿ ತೂಗುವ ವಿವಿಧ ವಿಷಯಗಳು. ಯಾವುದೂ ಹೆಚ್ಚಲ್ಲ, ಕಡಿಮೆಯೂ ಅಲ್ಲ. ತಾವು ತಮ್ಮ ತಮ್ಮ ಕ್ಷೇತ್ರದಲ್ಲಿ ಉತ್ತಮ ಜ್ಞಾನವನ್ನು ಹೊಂದಬೇಕು ಮತ್ತು ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಯಾಸೀನ್ ಬೇಗ್ ರವರು ವಹಿಸಿದ್ದರು.ಅವರು ತಮ್ಮ ಭಾಷಣದಲ್ಲಿ ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ಅನುಗ್ರಹ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರಶಂಸಿದರು.
ಆಡಳಿತ ಮಂಡಳಿಯ ಖಜಾಂಜಿಯಾಗಿರುವ ಶ್ರೀಯುತ ಹೈದರ್ ಅಲಿಯವರು ಅತಿಥಿಗಳ ಸಾಧನೆಯನ್ನು ಅಭಿನಂದಿಸಿ ಮಾತನಾಡಿದರು.
ವೇದಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಶಾಹುಲ್ ಹಮೀದ್, ಸಲಹಾ ಸಮಿತಿಯ ಕಾರ್ಯದರ್ಶಿಯಾಗಿರುವ ಶ್ರೀಮತಿ ಮಮಿತಾ ಎಸ್ ರೈ ಹಾಗೂ
ಕಾಲೇಜಿನ ಸಲಹಾ ಸಮಿತಿಯ ಸದಸ್ಯರು, ಬೋಧಕ – ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ನಂತರ
Excellencia 2023-2024 ಇದರ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಯಿತು ಮತ್ತು ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನವನ್ನು ನೀಡುವುದರ ಜೊತೆಗೆ ಉತ್ತಮ ತಂಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಹೇಮಲತ ಬಿ.ಡಿ.ಯವರು ಅತಿಥಿಗಳನ್ನು ಪರಿಚಯಪಡಿಸಿ ಎಲ್ಲರನ್ನು ಸ್ವಾಗತಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯರಾದ ಕುಮಾರಿ ಮರಿಯಮ್ ತಹಸೀನಾ ಮತ್ತು ಕುಮಾರಿ ನಫೀಸತ್ ಅಫ್ನ ಕಿರಾತ್ ಪಠಿಸಿ, ತೃತೀಯ ಬಿ.ಕಾಂ ವಿದ್ಯಾರ್ಥಿನಿಯಾದ ಕುಮಾರಿ ಅಫೀಫ ವಂದಿಸಿ, ತೃತೀಯ ಬಿ.ಎ ವಿದ್ಯಾರ್ಥಿನಿಯಾದ ಕುಮಾರಿ ಫಾತಿಮತುಲ್ ಶೈಮ ಕಾರ್ಯಕ್ರಮವನ್ನು ನಿರೂಪಿಸಿದರು.














