ವಿಟ್ಲ ಹೊರೈಝನ್ ಶಾಲೆ: ಶಿಕ್ಷಕ – ರಕ್ಷಕರ ಸಭೆ
ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಶಿಕ್ಷಕ- ರಕ್ಷಕ ಸಭೆಯು ಶಾಲಾ ಅಧ್ಯಕ್ಷ ಝುಬೈರ್ ಮಾಸ್ಟರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಪ್ರಸ್ತಾವನಾ ಭಾಷಣ ಮಾಡಿದರು.
ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್, ಕಾರ್ಯದರ್ಶಿ ನೋಟರಿ ಅಬೂಬಕರ್,ಮೇಲ್ವಿಚಾರಕ ಗಫೂರ್,ಲೆಕ್ಕ ಪರಿಶೋಧಕ ಇಕ್ಬಾಲ್ ಮೇಗಿನಪೇಟೆ, ಅಬ್ದುಲ್ ರಹಿಮಾನ್,ಸದರ್ ಉಮರ್ ಸಅದಿ ವೇದಿಕೆಯಲ್ಲಿದ್ದರು.
ಶಿಕ್ಷಕಿಯರಾದ ಚೇತನಾ,ಗಾಯತ್ರಿ ಮಾಹಿತಿ ನೀಡಿದರು.
ರೈಹಾನ ಸ್ವಾಗತಿಸಿ ನಿಶಾ ವಂದಿಸಿದರು. ಸೌಮ್ಯಾ ಹಾಗೂ ವಿದ್ಯಾ ನಿರೂಪಿಸಿದರು.











