ಮಡಿಕೇರಿ: 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಮಡಿಕೇರಿ : ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾದ್ರೆ, ಮೃತ ವ್ಯಕ್ತಿಯ ದರ್ಶನಕ್ಕೆ ಬುತ್ತಿದ್ದವರ ಕಾರು ಅಪಘಾತಕ್ಕೀಡಾಗಿ ಓರ್ವ ಮೃತಪಟ್ಟ ಘಟನೆ ಕೊಡಗಿನ ಶುಂಟಿಕೊಪ್ಪದಲ್ಲಿ ನಡೆದಿದೆ.
ಕಳೆದ ಭಾನುವಾರದಿಂದ ಕಾಣೆಯಾಗಿದ್ದ ಸುಂಟಿಕೊಪ್ಪ ಸಮೀಪದ ಸೆವೆಂತ್ ಮೈಲ್ ನಿವಾಸಿ ಪೌಲ್ ಡಿಸೋಜ ಎಂಬುವವರ ಮೃತದೇಹ ಇಂದು ಬೆಳಗ್ಗೆ ಅಲ್ಲಿನ ಸೌಭಾಗ್ಯ ತೋಟದ ಕೆರೆಯಲ್ಲಿ ಪತ್ತೆಯಾಗಿದೆ.
ನಾಲ್ಕು ದಿವಸಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಮೈಕಲ್ ಎಲ್ಲಿಯೂ ಕಂಡುಬಾರದ ಹಿನ್ನೆಲೆ ಮನೆಯವರು ಪೊಲೀಸ್ ದೂರು ದಾಖಲಿಸಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು.





