ಮಾವನನ್ನೇ ಚಾಕುವಿನಿಂದ ಇರಿದು ಕೊಂದ ಅಳಿಯ
ಹಾಸನ: ಸ್ವಂತ ಮಾವನನ್ನೇ ಅಳಿಯನೊಬ್ಬ ಚಾಕುವಿನಿಂದ ಇರಿದು ಕೊಂದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿ ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ.
ಪ್ರಭುಸ್ವಾಮಿ (50) ಕೊಲೆಯಾದ ಮಾವ. ಈತನನ್ನು ಅಳಿಯ ಅಜಯ್ (22) ಕೊಲೆ ಮಾಡಿದ್ದಾನೆ.
ಕೊಲೆಯಾದ ಪ್ರಭುಸ್ವಾಮಿ ತಂಗಿ ಸಾವಿತ್ರಮ್ಮ ಏಳೆಂಟು ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ತವರು ಮನೆಯಲ್ಲಿ ನೆಲೆಸಿದ್ದಳು.
ಗಂಜಿಗೆರೆ ಗ್ರಾಮದಲ್ಲಿ ಅಕ್ಕಪಕ್ಕದ ಮನೆಯಲ್ಲಿ ಅಣ್ಣ-ತಂಗಿ ವಾಸವಾಗಿದ್ದರು. ಹೀಗಾಗಿ ಆಸ್ತಿ ವಿಚಾರವಾಗಿ ಪ್ರಭುಸ್ವಾಮಿಯು ತನ್ನ ಸಾವಿತ್ರಮ್ಮ ಜೊತೆ ಆಗಾಗ ಜಗಳವಾಡುತ್ತಿದ್ದನು.





