ಬೈಕ್ ರಿಪೇರಿ ಹಣದ ವಿಚಾರದಲ್ಲಿ ಗಲಾಟೆ: ಬೈಕ್ ಮಾಲಕನ ಕೊಲೆಯಲ್ಲಿ ಅಂತ್ಯ
ಚಿಕ್ಕಬಳ್ಳಾಪುರ: ಬೈಕ್ ರಿಪೇರಿ ಹಣದ ವಿಚಾರದಲ್ಲಿ ನಡೆದ ಗಲಾಟೆ ಬೈಕ್ ಮಾಲೀಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಗೌರಿಬಿದನೂರಿನ ಚನ್ನಬೈರನಹಳ್ಳಿಯಲ್ಲಿ ನಡೆದಿದೆ.
ಚನ್ನಬೈರನಹಳ್ಳಿಯ ಸತ್ಯನಾರಾಯಣ (45) ಹತ್ಯೆಯಾದ ವ್ಯಕ್ತಿ. ಮೆಕ್ಯಾನಿಕ್ ಚೇತನ್ ಆತನ ಸ್ನೇಹಿತ ಜ್ವಾಲೇಂದ್ರ, ಓರ್ವ ಅಪ್ರಾಪ್ತ ಸೇರಿದಂತೆ ನಾಲ್ವರು ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಆತ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ.




