March 22, 2026

ಇನ್‌ಸ್ಟಾಗ್ರಾಂನಲ್ಲಿ ಯುವಕನಿಂದ ಕಿರುಕುಳ: ಬೇಸತ್ತ ಯುವತಿ ಆತ್ಮಹತ್ಯೆ

0
image_editor_output_image2086496195-1698384970985.jpg

ಭಟ್ಕಳ : ಇನ್‌ಸ್ಟಾಗ್ರಾಮ್ ಮೂಲಕ ಯುವಕನೊಬ್ಬನೊಂದಿಗೆ ಸ್ನೇಹ ಬೆಳೆಸಿ, ಸ್ನೇಹ ಪ್ರೀತಿಗೆ ತಿರುಗಿ, ಬಳಿಕ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

ಮೃತ ಯುವತಿಯನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣ ಸಮೀಪದ ಹಾಡವಳ್ಳಿ ಗ್ರಾಮದ ನಿವಾಸಿ 24 ವರ್ಷ ಪ್ರಾಯದ ನೇತ್ರಾ ಗೋವಾಲಿ ಎಂದು ಗುರುತಿಸಲಾಗಿದೆ.

ಮೃತ ಯುವತಿಯ ತಂದೆ ಆಕೆಯ ಇನ್‌ಸ್ಟಾಗ್ರಾಮ್ ಸ್ನೇಹಿತ ಗೋವರ್ಧನ ಮೊಗೇರ ಎಂಬವರ ವಿರುದ್ಧ ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆತನ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!