August 27, 2026

ಕೊಣಾಜೆ: ಮನೆಯಲ್ಲಿ ಮಲಗಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನ, ಆರೋಪಿಯ ಬಂಧನ

0
image_editor_output_image-241341503-1698385557525.jpg

ಮಂಗಳೂರು: ಮನೆಯಲ್ಲಿ ಮಲಗಿದ್ದ ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣ ದಾಖಲಾದ ಒಂದು ಗಂಟೆಯ ಒಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹರೇಕಳ ಗ್ರಾಮದ ಕೊಜಪಾಡಿಯ ನೌಫಾಲ್‌ (32) ಎಂದು ಗುರುತಿಸಲಾಗಿದೆ.

ಆರೋಪಿ ಬಾಡಿಗೆಮನೆಯಲ್ಲಿ ವಾಸವಾಗಿರುವ ನಾನು ಊಟ ಮುಗಿಸಿ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಮಕ್ಕಳ ಜೊತೆ ಬೆಡ್‌ ರೂಂನಲ್ಲಿ ಮಲಗಿದ್ದೆ. ರಾತ್ರಿ ಸುಮಾರು 12.10ರ ವೇಳೆ ಯಾರೋ ನನ್ನ ಕಾಲು ಸವರಿದಂತಾಯಿತು.

ಎದ್ದು ಲೈಟ್‌ ಹಾಕಿ ನೋಡಿದಾಗ ಕೋಣೆಯೊಳಗೆ ಪುರುಷನೊಬ್ಬನಿರುವುದು ಕಂಡುಬಂತು. ನನ್ನನ್ನು ನೋಡಿದ ಕೂಡಲೇ ಆತ ಮಂಚದ ಕೆಳಗಿನಿಂದ ಎದ್ದು ಹಿಂಬಾಗಿಲನ್ನು ತೆರೆದು ಓಡಿ ಹೋದ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!