ದುಬೈನಲ್ಲಿ ಹೃದಯಾಘಾತ: ಕೂಳೂರಿನ ಯುವಕ ಮೃತ್ಯು
ಮಂಗಳೂರು: ದುಬೈಯ ಸಲಾವುದ್ದೀನ್ ಎಂಬಲ್ಲಿ ಕರಾವಳಿ ಮೂಲದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಭಾನುವಾರ ನಡೆದಿದೆ.
ಮೃತರನ್ನು ಕೂಳೂರು ಪಂಜಿಮೊಗರು ವಿದ್ಯಾನಗರ ನಿವಾಸಿ ಮುಹಮ್ಮದ್ ಎಂಬವರು ಪುತ್ರ ಅಖ್ತರ್(27) ಎಂದು ಗುರುತಿಸಲಾಗಿದೆ. ಅಖ್ತರ್ ಕಳೆದ 7 ತಿಂಗಳಿನಿಂದ ದುಬೈಯಲ್ಲಿ ದುಡಿಯುತ್ತಿದ್ದರು.
ಭಾನುವಾರ ಕರ್ತವ್ಯ ಮುಗಿಸಿ ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅಖ್ತರ್ ಏಳದಿದ್ದಾಗ ಸಂಗಡಿಗರು ಪರಿಶೀಲಿಸಿದಾದ ಅವರು ನಿಧನರಾಗಿದ್ದರು ಎಂದು ತಿಳಿದುಬಂದಿದೆ.
ಮೃತದೇಹವನ್ನು ಊರಿಗೆ ತರುವ ನಿಟ್ಟಿನಲ್ಲಿ ಕೆಸಿಎಫ್ ಸಂಘಟನೆಯ ಪದಾಧಿಕಾರಿಗಳು, ಸೌದಿಯಲ್ಲಿರುವ ಮೃತರ ಸಹೋದರ ಇರ್ಫಾನ್ ಸ್ಥಳಕ್ಕೆ ಆಗಮಿಸಿದ್ದು ಕ್ರಮ ಕೈಗೊಂಡಿದ್ದಾರೆ. ಮೃತರು ತಂದೆ, ತಾಯಿ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.





