March 20, 2026

ಕಾರವಾರ: ಸಮುದ್ರದಲ್ಲಿ ಈಜಲು ತೆರಳಿದ್ದ ಪ್ರವಾಸಿಗ ಮುಳುಗಿ ಸಾವು

0
image_editor_output_image-71756711-1698122592305.jpg

ಕಾರವಾರ: ಸಮುದ್ರದಲ್ಲಿ ಈಜಲು ತೆರಳಿದ್ದ ಪ್ರವಾಸಿಗನೊಬ್ಬ ಮುಳುಗಿ ಸಾವಿಗೀಡಾದ ಘಟನೆ ಕುಮಟಾದ ಬಾಡದಲ್ಲಿ ನಡೆದಿದೆ. ಮತ್ತೊಂದು ಕಡೆ ಮುರ್ಡೇಶ್ವರದಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ಮೂರು ಜನ ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಮೃತನನ್ನು ಶಿವಮೊಗ್ಗ ಮೂಲದ ಪ್ರಶಾಂತ್ ಗುಪ್ತ ಎಂದು ಗುರುತಿಸಲಾಗಿದೆ. ಮೃತ ಪ್ರಶಾಂತ್ 11 ಜನರೊಂದಿಗೆ ಕುಮಟಾಕ್ಕೆ ಪ್ರವಾಸಕ್ಕೆ ತೆರಳಿದ್ದರು.

ಈ ವೇಳೆ ಸಮುದ್ರಕ್ಕೆ ಈಜಲು ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಸಂಬಂಧ ಕುಮಟಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!