March 19, 2026

ಮಂಗಳೂರು: ಅವಧಿ ಮೀರಿದ ವೀಸಾ: ಇಬ್ಬರು ವಿದೇಶಿ ಪ್ರಜೆಗಳ ಬಂಧನ

0
IMG-20231022-WA0004.jpg



ಮಂಗಳೂರು: ವೀಸಾ ಅವಧಿ ಮುಗಿದ ನಂತರವೂ ಅಕ್ರಮವಾಗಿ ನೆಲೆಸಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಭಾನುವಾರ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.

ಬಂಧಿತರು ನೈಜೀರಿಯಾದ ಅಂಕಿತೋಲಾ ಮತ್ತು ಘಾನಾದ ಸಲಾಮ್ ಕ್ರಿಶ್ಚಿಯನ್ ಬಂಧಿತರು.

ಬಂಧನದ ನಂತರ ಇಬ್ಬರನ್ನು ಬೆಂಗಳೂರಿನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಮುಂದೆ ಹಾಜರುಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಪರಿಶೀಲನೆಯ ನಂತರ, ಬೆಂಗಳೂರಿನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ಬಂಧನ ಕೇಂದ್ರದಲ್ಲಿಡಲು ನಿರ್ದೇಶಿಸಿದೆ.

Leave a Reply

Your email address will not be published. Required fields are marked *

error: Content is protected !!