November 22, 2024

ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿನಲ್ಲಿ 2023-24 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ

0



ಅನುಗ್ರಹ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ
ವಾರ್ಷಿಕ ಕ್ರೀಡಾಕೂಟವನ್ನು ಸಂಭ್ರಮದಿಂದ ನಡೆಸಲಾಯಿತು.

ಮುಖ್ಯ ಅತಿಥಿಗಳಿಂದ ವಿದ್ಯಾರ್ಥಿ ನಾಯಕಿಯರಿಗೆ ಕಾಲೇಜು ಕ್ರೀಡಾ ಧ್ವಜವನ್ನು ಹಸ್ತಾಂತರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ವಿದ್ಯಾರ್ಥಿನಿಯರು ತಂಡವಾರು ಪಥ ಸಂಚಲನ ಪ್ರದರ್ಶನ ನೀಡಿದರು. ವಿದ್ಯಾರ್ಥಿ ಕ್ರೀಡಾನಾಯಕಿ ಕುಮಾರಿ ಹಸೀನಾ ಇವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.


ಅನುಗ್ರಹ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶ್ರೀಯುತ ಶಾಹುಲ್ ಹಮೀದ್ ರವರು
ತಮ್ಮ ಅತಿಥಿ ಭಾಷಣದಲ್ಲಿ ಕ್ರೀಡೆಯ ಮಹತ್ವವನ್ನು ತಿಳಿಸುತ್ತಾ , ವಿದ್ಯಾರ್ಥಿನಿಯರೆಲ್ಲರು ಕ್ರೀಡೆಯಲ್ಲಿ ಉತ್ಸಾಹದಿಂದ ಬಾಗವಹಿಸಿ,ಸೋತಾಗ ಕುಗ್ಗದೆ ಉತ್ತಮ ಪ್ರಯತ್ನಕ್ಕಾಗಿ ಸಂತೋಷಪಡಬೇಕೆಂದು ಹೇಳುತ್ತಾ ಎಲ್ಲರಿಗು ಶುಭ ಹಾರೈಸಿದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಯಾಸಿನ್ ಬೇಗ್ ರವರು ಜೀವವದಲ್ಲಿ ಶಿಸ್ತಿನ ಬಗ್ಗೆ ವಿದ್ಯಾರ್ಥಿನಿಯರಿಗೆ ಉತ್ತಮ ಸಂದೇಶವನ್ನು ನೀಡುವ
ಮೂಲಕ ಅಧ್ಯಕ್ಷೀಯ ಭಾಷಣವನ್ನು ಮಾಡಿದರು.
ತೃತೀಯ ಬಿಎ ವಿದ್ಯಾರ್ಥಿನಿಯಾದ ಕುಮಾರಿ ಫಾತಿಮಾತ್ ಶೈಮ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಕುಮಾರಿ ಕುಲ್ಸು ನಿಹಾನ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವವರನ್ನು ಸ್ವಾಗತಿಸಿದರು.

ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಖದೀಜಾ ಶೈಮಾ ರವರು ಕಿರಾತ್ ಪಠಿಸಿದರು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಖಜಾಂಚಿಯಾಗಿರುವ ಶ್ರೀಯುತ ಹೈದರ್ ಅಲಿ
ನೀರ್ಕಜೆ, ಆಡಳಿತ ಮಂಡಳಿಯ ಸದಸ್ಯರಾದ ಅಬ್ದುಲ್ಲಾ ಕುಂಞ, ದೈಹಿಕ ಶಿಕ್ಷಕಿ ಯಾಗಿ ಆಗಮಿಸಿದ ಕುಮಾರಿ ಅಶ್ವಿತಾ ಹಾಗೂ ಶ್ರೀಮತಿ ಅಶುರಾ ಬೀವಿ ಯನ್, ಕಾಲೇಜಿನ ಪ್ರಾಂಶುಪಾಲೆಯವರಾದ ಹೇಮಲತ ಬಿ. ಡಿ ಹಾಗೂ ಕಾಲೇಜಿನ ಸಲಹಾ ಸಮಿತಿಯ ಕಾರ್ಯದರ್ಶಿಯವರಾದ ಶ್ರೀಮತಿ ಮಮಿತಾ ಎಸ್ ರೈ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭವನ್ನು ಕಾಲೇಜಿನ ಪ್ರಾಂಶುಪಾಲೆಯಾದ ಹೇಮಲತ ಬಿ ಡಿ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕ್ರೀಡಾಕೂಟದ ಯಶಸ್ಸನ್ನು ಪ್ರಶಂಶಿಸುತ್ತಾ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.

ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.

ಕ್ರೀಡಾಕೂಟದಲ್ಲಿ 100 ಹಾಗೂ 200 ಮೀಟರ್ ಓಟದ ಸ್ಪರ್ಧೆ, ಹಗ್ಗ ಜಗ್ಗಾಟ, ಗುಂಡು ಎಸೆತ, ಚಕ್ರ ಎಸೆತ, 400 ಮೀಟರ್ ರಿಲೇ, ತ್ರೋಬಾಲ್,ಕಬಡ್ಡಿ, ಖೋ ಖೋ, ಶಟಲ್ ಕಾಕ್ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

Leave a Reply

Your email address will not be published. Required fields are marked *

error: Content is protected !!