May 11, 2026

ಮಂಗಳೂರು: ನಿಯಂತ್ರಣ ತಪ್ಪಿ ಹೊಂಡ ಬಿದ್ದ ಕಾರು: ವೀಡಿಯೊ ವೈರಲ್

0
image_editor_output_image2063456777-1697781434971.jpg

ಮಂಗಳೂರು: ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಂಡ ಬಿದ್ದ ಘಟನೆ ಅ. 15 ರಂದು ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಮಂಗಳೂರು ನಗರ ಹೊರವಲಯದ ಗುರುಪುರ ಬಳಿ ಘಟನೆ ನಡೆದಿದೆ. ಅತೀ ವೇಗವಾಗಿ ಕಾರು ಚಲಾಯಿಸಿದ ಬಂಟ್ವಾಳದ ಕೈಕಂಬ ಜೋಡುಮಾರ್ಗ ನಿವಾಸಿ , ಚಾಲಕ ಮಹಮ್ಮದ್ ಕಾರು ಹೊಂಡಕ್ಕಿಳಿದರೂ ಅಪಾಯದಿಂದ ಪಾರಾಗಿದ್ದಾರೆ.

ಅತೀ ವೇಗದ ಚಾಲನೆ ಮಾಡಿದ ಮಹಮ್ಮದ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಬಜ್ಪೆ ಠಾಣಾ ಪೊಲೀಸರು ಮಹಮ್ಮದ್ ಗೆ ಮೂರು ಸಾವಿರ ದಂಡ ವಿಧಿಸಿದ್ದಾರೆ. ಅಲ್ಲದೆ ಅತೀ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯ ಪ್ರಕರಣ ದಾಖಲು ಮಾಡಿದ್ದಾರೆ. ಕಾರು ಅತೀ ವೇಗದಿಂದ ಚಲಾಯಿಸಿ ಹೊಂಡಕ್ಕೆ ಬೀಳುತ್ತಿರುವ ದೃಶ್ಯ ಇಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಮೈ ಜುಮ್ಮೆನಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!