October 26, 2026

ಕಾನೂನುಬದ್ಧ ಮಾಂಸ ಸಾಗಾಟಕ್ಕೆ ತಡೆ ನೀಡಿದರೆ 10 ವರ್ಷ ಜೈಲು ಶಿಕ್ಷೆ: ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ

0
1200-675-26295303-thumbnail-16x9-news

ಮಂಗಳೂರು: ಗೋಹತ್ಯೆ ಹಾಗೂ ಕಾನೂನುಬಾಹಿರ ಜಾನುವಾರು ಸಾಗಾಟವನ್ನು ತಡೆಯಲು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರೆ ಸಾಕು, ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

‘ತಲಪಾಡಿಯಿಂದ ಜೋಕಟ್ಟೆಗೆ ಅಕ್ರಮ ಗೋ ಸಾಗಾಟ ವಾಹನದ ಮಾಹಿತಿಯನ್ನು ಕಂಕನಾಡಿ ನಗರ ಪೊಲೀಸರಿಗೆ ನೀಡಿದ್ದರೂ ಪೊಲೀಸರು ನಿರ್ಲಕ್ಷಿಸಿದರು’ ಎಂದು ಮಂಗಳೂರು ಮಹಾನಗರ ಬಜರಂಗದಳ ಸಂಘಟನೆ ಸಾಮಾಜಿಕ ಜಾಲಾತಾಣದಲ್ಲಿ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಅವರು ಸ್ಪಷ್ಟನೆ ನೀಡಿದ್ದಾರೆ.

‘ಇದೊಂದು ಮಾಂಸ ಸಾಗಾಟ ಪ್ರಕರಣ. ಈ ಪ್ರಕರಣದಲ್ಲಿ ಮಾಂಸವನ್ನು ಕೇರಳದಿಂದ ಖರೀದಿಸಿ ನಗರದ ಪರವಾನಗಿ ಹೊಂದಿರುವ ಅಂಗಡಿಗೆ ತರಲಾಗಿತ್ತು. ಕರ್ನಾಟಕದಲ್ಲಿ ಗೋಹತ್ಯೆ ನಿಷೇಧವಿದ್ದರೂ, ನಿಯಮಗಳ ಪ್ರಕಾರ ಕಾನೂನುಬದ್ಧ ಮಾಂಸ ಮಾರಾಟ ಮತ್ತು ಸಾಗಾಟಕ್ಕೆ ಇಲ್ಲಿ ಅವಕಾಶವಿದೆ. ಹೀಗಾಗಿ ವಾಹನವನ್ನು ತಡೆಯುವುದು, ದಾಳಿ ಮಾಡುವುದು ಅಥವಾ ಬೆದರಿಕೆ ಹಾಕುವುದು ಸೇರಿದಂತೆ ಯಾವುದೇ ಕಾನೂನುಬದ್ಧ ಕೆಲಸವನ್ನು ತಡೆಯಲು ಯತ್ನಿಸುವುದು ಕೂಡ ಅಪರಾಧ ಎಸಗಿದಂತಾಗುತ್ತದೆ. ಇಂತಹ ಅಪರಾಧಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು ಎಂದು ಎಚ್ಚರಿಸಿದ್ದಾರೆ.

ಸೋಮವಾರ ಬೆಳಗ್ಗೆ ಮಾಂಸ ಸಾಗಾಟ ವಾಹನವನ್ನು ತಡೆಯಲು ಯತ್ನಿಸಲಾಗಿದೆ ಎಂಬ ದೂರು ಬಂದಿದೆ. ಇದು ನೈಜ ಎಂದು ಕಂಡುಬಂದರೆ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!