ಉಡುಪಿ: ಉದ್ಯಾವರದ ಯುವಕ ವಿಷ ಸೇವಿಸಿ ಆತ್ಮಹತ್ಯೆ
ಉಡುಪಿ: ಉದ್ಯಾವರ ನಿವಾಸಿ, ಐಸಿವೈಎಂ ಉದ್ಯಾವರ ಘಟಕದ ಸಕ್ರಿಯ ಸದಸ್ಯ ರೋಯಲ್ ಲೂಯಿಸ್ (22) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಉದ್ಯಾವರ ಪಿತ್ರೋಡಿ ನಿವಾಸಿಯಾಗಿದ್ದ ಇವರು, ಉಡುಪಿಯ ಪ್ರತಿಷ್ಠಿತ ಖಾಸಗಿ ಸಂಸ್ಥೆಯಲ್ಲಿ ಕೆಲವೊಂದು ಸಮಯಗಳಿಂದ ಉದ್ಯೋಗದಲ್ಲಿದ್ದು, ವೈಯುಕ್ತಿಕ ಕಾರಣ ಮತ್ತು ಸಮಸ್ಯೆಗಳಿಂದ ಕೆಲಸವನ್ನು ಬಿಟ್ಟಿದ್ದರು. ಉದ್ಯೋಗದ ನಿಮಿತ್ತ ಮಂಗಳೂರಿನ ಪಿಜಿಯಲ್ಲಿದ್ದ ಇವರು ನಿನ್ನೆ ಯಾವುದೋ ಕಾರಣಕ್ಕೆ ಮನವೊಂದು ವಿಷ ಸೇವಿಸಿದ್ದು, ಕೂಡಲೇ ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಇಂದು ಮಧ್ಯರಾತ್ರಿ ನಿಧನರಾಗಿದ್ದು, ಇನ್ನಷ್ಟು ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.
ಮೃತರು ತಾಯಿ, ಸಹೋದರ ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.


