May 9, 2026

ಜೂಜು ಅಡ್ಡೆ ಮೇಲೆ ಪೊಲೀಸರ  ದಾಳಿ: ತಪ್ಪಿಸಿಕೊಳ್ಳಲು ನದಿಗೆ ಹಾರಿದ್ದ ವ್ಯಕ್ತಿ ಸಾವು

0
image_editor_output_image256663692-1697170995993.jpg

ರಾಮನಗರ: ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ತಪ್ಪಿಸಿಕೊಳ್ಳಲು ಅರ್ಕಾವತಿ ನದಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿ ಕನಕಪುರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಕನಕಪುರದ ತಿಗಳರಹಳ್ಳಿ ಗ್ರಾಮದ ಮರಿಸ್ವಾಮಿ (30) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಕಳೆದ ಮೂರು ದಿನಗಳ ಹಿಂದೆ ಜೂಜು ಅಡ್ಡೆ ಮೇಲೆ ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ಮಾಡಿದ್ದರು.

ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಮರಿಸ್ವಾಮಿ ನದಿಗೆ ಹಾರಿದ್ದ. ನದಿಯಲ್ಲಿ ಈಜಿ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ಮರಳಿ ಬಂದಿದ್ದರು.

ಆದರೆ ಮೂರು ದಿನಗಳ ಬಳಿಕ ಮರಿಸ್ವಾಮಿ ಶವ ಅರ್ಕಾವತಿ ನದಿಯಲ್ಲಿ ಪತ್ತೆಯಾಗಿದೆ.

Leave a Reply

Your email address will not be published. Required fields are marked *

error: Content is protected !!