February 4, 2026

ವಿಟ್ಲ: ಕರ್ನಾಟಕ ವೆಹಿಕಲ್ ಇನ್ಶೂರೆನ್ಸ್ ಇದರ ನೂತನ ಕಛೇರಿ VH ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ

0
IMG-20231012-WA0038.jpg

ವಿಟ್ಲ: ಕರ್ನಾಟಕ ವೆಹಿಕಲ್ ಇನ್ಶೂರೆನ್ಸ್ ಇದರ ನೂತನ ಕಛೇರಿ VH ಕಾಂಪ್ಲೆಕ್ಸ್ ವಿಟ್ಲ ಇಲ್ಲಿ ಶುಭಾರಂಭಗೊಂಡಿತು.

ಕಳೆದ ನಾಲ್ಕು ವರ್ಷಗಳಿಂದ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ವಿಟ್ಲ ಇಲ್ಲಿ ಕಾರ್ಯಚರಿಸುತ್ತಿರುವ ಈ ಸಂಸ್ಥೆಯು ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ.

ಹೋರಿಝನ್ ಪಬ್ಲಿಕ್ ಸ್ಕೂಲ್ ಇದರ ಸಂಚಾಲಕರಾದ ಲಯನ್ ಮಹಮ್ಮದ್ ಇಕ್ಬಾಲ್ ಹೊನೆಸ್ಟ್ ಇವರು ಉದ್ಘಾಟನೆಗೊಳಿಸಿ, ಶುಭಹಾರೈಸಿದರು ಮತ್ತು ಸಂಸ್ಥೆಯ ಸೇವೆಯ ಬಗ್ಗೆ ಗುಣಗಾನ ಮಾಡಿದರು. ಮತ್ತು ಫ್ಯೂಚರ್ ಜನರಲಿ ಇನ್ಶೂರೆನ್ಸ್ ಕಂಪನಿ ಇದರ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಶ್ರೀಯುತ ಮುಕ್ತಾರ್ ಬೊಬ್ಬೆಕೇರಿ ಇನ್ಶೂರೆನ್ಸ್ ಮಹತ್ವವನ್ನು ವಿವರಿಸಿ ಶುಭಹಾರೈಸಿದರು. ಲಯನ್ಸ್ ಕ್ಲಬ್ ವಿಟ್ಲ ಇದರ ಅಧ್ಯಕ್ಷೆ ಲಯನ್ ಜಾಲಜಾಕ್ಷಿ ಬಿ ಗೌಡ, VH ಕಾಂಪ್ಲೆಕ್ಸ್ ಮಾಲಕರು ಅಶ್ರಫ್ VH, ಕರ್ನಾಟಕ ಕಾರ್ಸ್ ಮಾಲಕರು ಗಫೂರ್ ವಿಟ್ಲ, ಹಯಾತುಲ್ ಇಸ್ಲಾಮ್ ಮದರಸ ಇದರ ಅಧ್ಯಕ್ಷರಾದ ಜನಾಬ್ ಇಬ್ರಾಹಿಂ KP, ನಿವೃತ್ತ ಸೈನಿಕ ಲಯನ್ ಬಾಲಕೃಷ್ಣ ಗೌಡ, ಇಕ್ಬಾಲ್ ಬೊಬ್ಬೆಕೇರಿ, ಹಸೈನಾರ್ ತಾಳಿತನೂಜಿ ಉಪಸ್ಥಿತರಿದ್ದರು. ಝುಬೈರ್ ಮಾಸ್ಟರ್ ಬೊಬ್ಬೆಕೇರಿ ಸ್ವಾಗತಿಸಿ, ಸಂಸ್ಥೆಯ ಮಾಲಕರು ಸಫ್ವಾನ್ ಅಹಮ್ಮದ್ ಇವರು ತಮ್ಮ ಸೇವೆಗಳ ಬಗ್ಗೆ ವಿವರಿಸುತ್ತಾ ಬಂದ ಅತಿಥಿಗಳನ್ನು ವಂದಿಸಿದರು.
ಈ ಸಂದರ್ಭ ಸಂಸ್ಥೆಯ ಸಿಬ್ಬಂದಿ ಸಲಾಂ ಬೊಬ್ಬೆಕೇರಿ ಉಪಸ್ಥಿತರಿದ್ದರು.

ಬೆಳಿಗ್ಗೆ ಹಯಾತುಲ್ ಇಸ್ಲಾಮ್ ಮದರಸ ಕೆದುಮೂಲೆ ಇದರ ಅಧ್ಯಾಪಕರಾದ MP ಝಕರಿಯ ಮುಸ್ಲಿಯಾರ್ ಮಾಪಾಳ್ ಹಾಗೂ ಹನೀಫ್ ಸ ಅದಿ ದುಆ ಆಶೀರ್ವಚನ ಗೊಳಿಸಿದರು

Leave a Reply

Your email address will not be published. Required fields are marked *

error: Content is protected !!