ಬಂಟ್ವಾಳ: ಭಾರೀ ಗಾಳಿ ಸಹಿತ ಸಿಡಿಲು ಮಳೆ: ತಾಲೂಕಿನ ಅನೇಕ ಕಡೆಗಳಲ್ಲಿ ಮನೆ ಸೊತ್ತುಗಳಿಗೆ ಹಾನಿ
ಮಂಗಳವಾರ ರಾತ್ರಿ ಸುರಿದ ಸಿಡಿಲು, ಗಾಳಿ ಸಹಿತ ಭಾರಿ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನೇಕ ಕಡೆಗಳಲ್ಲಿ ಮನೆ ಹಾಗೂ ಇತರ ಸೊತ್ತಗಳಿಗೆ ಹಾನಿಯಾಗಿದೆ. ಹಾನಿಯಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದೆ ಎಂದು ಬಂಟ್ವಾಳ ತಾಲೂಕು ಆಡಳಿತ ವರದಿ ನೀಡಿದೆ.
ತಾಲೂಕಿನ ಬೋಳಂತೂರು ಗ್ರಾಮದ ಸುರಿಬೈಲ್ ಎಂಬಲ್ಲಿ ಅಬ್ದುಲ್ ಖಾದರ್ ರವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸುತ್ತಮುತ್ತಲಿನ ಹಲವು ಕಡೆಗಳಲ್ಲಿ ಸಿಡಿಲು ಬಡಿದ ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಕೆಲವರ ಮನೆಗಳಿಗೆ ಹಾನಿಯಾಗಿವೆ, ಮನೆಯಲ್ಲಿನ ಗೊಡೆಗಳು ಬಿರುಕು ಬಿಟ್ಟಿರುವ ಪರಿಣಾಮ ಮನೆಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ.




