March 18, 2026

ಮಂಗಳೂರು: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

0
ms-210522-death.jpg


 
ಬಜ್ಪೆ: ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದಿದೆ.


ಕೊಳಂಬೆ ಗ್ರಾಮದ ಹೊಗೆಪದವಿನ ನಿವಾಸಿ ಶೋಭಾ (40) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ.

ಪಕ್ಕದ ಮನೆಯ ತೋಟದಲ್ಲಿದ್ದ ಅವರಣವಿಲ್ಲದ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶೋಭಾ ಅವಿವಾಹಿತೆಯಾಗಿದ್ದು, ಭಾನುವಾರ ರಾತ್ರಿ 10 ಗಂಟೆಗೆ ಊಟ ಮಾಡಿ ಮಲಗಿದ್ದರು. ಸೋಮವಾರ ಬೆಳಗ್ಗೆ ಮನೆಯವರು ನೋಡಿದಾಗ ಮನೆಯಲ್ಲಿ ಇಲ್ಲದ ಕಾರಣ ಹುಡುಕಾಗಿದಾಗ ರಾಮಕೃಷ್ಣ ಭಟ್‌ ಅವರ ತೋಟದಲ್ಲಿರುವ ಬಾವಿಯಲ್ಲಿ ಅವರ ಶವ ಪತ್ತೆಯಾಗಿದೆ. ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!