ಬಂಟ್ವಾಳ: ಸಿಎಂ ಸಿದ್ದರಾಮಯ್ಯರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಿ ವಾಟ್ಸಪ್ ನಲ್ಲಿ ವೈರಲ್: ವೈರಲ್ ಮಾಡಿದವರ ವಿರುದ್ಧ ದೂರು ದಾಖಲು
ಬಂಟ್ವಾಳ: ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಿ ವಾಟ್ಸಪ್ ಗ್ರೂಪ್ ನಲ್ಲಿ ಹರಿಯಬಿಟ್ಟವನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಂದಾವರ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭ ಅವರಿಗೆ ದೂರು ನೀಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ಹಸಿರು ಕೋಟು ಹಾಗೂ ತಲೆಗೆ ಟೋಪಿ ಧರಿಸಿ ಹಂದಿಯ ಮೇಲೆ ಕುಳಿತಿರುವಂತೆ ಚಿತ್ರೀಕರಿಸಿ “ಮಸೀದಿ ಕಡೆ ಸಿದ್ದು ಸವಾರಿ” ಎಂಬ ತಲೆ ಬರಹವಿರುವ ಫೋಟೋ ಜೈ ಕರ್ನಾಟಕ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಸೋಮನಗೌಡ ಎಂಬವನು ಹರಿಯಬಿಟ್ಟಿದ್ದು ಇದು ಮುಖ್ಯಮಂತ್ರಿ ಅವರ ಘನತೆಗೆ ಧಕ್ಕೆ ಉಂಟು ಮಾಡುವುದಲ್ಲದೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ, ಆದ್ದರಿಂದ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.
ದೂರು ಸ್ವೀಕರಿಸಿದ ಬಂಟ್ವಾಳ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭ ಅವರು ದೂರನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಯುವ ಕಾಂಗ್ರೆಸ್ ಪಾಣೆಮಂಗಳೂರು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಸಿರಾಜ್ ಮದಕ, ಸಮದ್ ಕೈಕಂಬ, ಶಫೀಕ್ ಗೂಡಿನಬಳಿ ಜೊತೆಗಿದ್ದರು.




