March 18, 2026

ಪ್ರೀತಿಸಿ ಕೈಕೊಟ್ಟ ಯುವತಿ: ಮನನೊಂದ ಯುವಕ ಆತ್ಮಹತ್ಯೆ

0
image_editor_output_image1926531458-1696844013316.jpg

ಜೆ.ಸಿ.ನಗರ: ಪ್ರೇಮ ವೈಫಲ್ಯದಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯ ನಗರದ ಕುರುಬರಹಳ್ಳಿಯ ಜೆ.ಸಿ ನಗರದಲ್ಲಿ ನಡೆದಿದೆ. ಯೋಗೇಶ್ (25) ಆತ್ಮಹತ್ಯೆಗೆ ಶರಣಾದ ಯುವಕ.

ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ನಂತರ ಯೋಗೇಶ್ ನನ್ನು ಪೋಷಕರು ಅಸ್ಪತ್ರೆಗೆ ದಾಖಲಿಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.

ಆದರೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಯುವಕ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.

ಮೃತ ನಾಗೇಶ್ ನಾಗಮಂಗಲದ ಅಡೇನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ನಗರದಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದನಂತೆ. ನಾಗಮಂಗಲ ಮೂಲದ ಯುವತಿಯನ್ನು ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಆದರೆ ಇತ್ತೀಚಿಗೆ ಯೋಗೇಶ್ ನಿಂದ ಯುವತಿ ದೂರವಾಗಿದ್ದು ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!