March 18, 2026

ಉಡುಪಿ: ತಂದೆ ಮಗನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ: ತಂದೆಯ ಸಾವಿನಲ್ಲಿ ಅಂತ್ಯ

0
IMG-20231008-WA0005.jpg



ಉಡುಪಿ: ತಂದೆ-ಮಗನ ನಡುವಿನ ಜಗಳ ವಿಕೋಪಕ್ಕೆ ತಿರುಗಿ ತಂದೆಯ ಸಾವಿಗೆ ಕಾರಣವಾದ ಘಟನೆ ಬ್ರಹ್ಮಾವರ ತಾಲೂಕು ಪೆಜಮಂಗೂರು ಗ್ರಾಮದ ಮೊಗವೀರ ಪೇಟೆಯಲ್ಲಿ ನಡೆದಿದೆ.

ಮೃತ, ಸಾಧು ಮರಕಾಲ ಎಂದು ಗುರುತಿಸಲಾಗಿದೆ. ತನ್ನ ತಂದೆ ತಮ್ಮ ಮನೆಯನ್ನು ಬಿಟ್ಟು ಹೋಗಬೇಕೆಂದು ಬಯಸಿದ್ದ ತನ್ನ ಸ್ವಂತ ಮಗ ಆನಂದ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಶನಿವಾರ ಬೆಳಗ್ಗೆ ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು, ಮಾರಣಾಂತಿಕ ಘಟನೆ ನಡೆದಿದೆ ಎನ್ನಲಾಗಿದೆ.

ಅಂದು ಮಧ್ಯಾಹ್ನ ಸಾಧು ಅವರ ಸೊಸೆ ಸುಹಾಸಿನಿ ಕೊಕ್ಕರ್ಣೆಯಲ್ಲಿದ್ದಾಗ ಪಕ್ಕದ ಮನೆಯವರಿಂದ ಕರೆ ಬಂತು. ಮಾವ ಸಾಧುರವರು ಮನೆಯ ಹಿಂಬದಿಯ ಓಣಿಯಲ್ಲಿ ಗಾಯಗೊಂಡು ಬಿದಿದ್ದು ತುಂಬಾ ರಕ್ತ ಹರಿದಿರುತ್ತದೆ ಎಂದು ನೆರೆಯವರು ತಿಳಿಸಿದರು. ತಕ್ಷಣ ಮೊಗವೀರ ಪೇಟೆಗೆ ಧಾವಿಸಿದ ಸೊಸೆ ಸುಹಾಸಿನಿ ಮಾವ ಸಾಧು ಅವರ ಎಡ ಮತ್ತು ಬಲ ಕಾಲು, ಬೆನ್ನು ಹಾಗೂ ದೇಹದ ಇತರ ಭಾಗಗಳಲ್ಲಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ನೆರೆಹೊರೆಯವರು ಸಾಧುವನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು, ಆದರೆ ವೈದ್ಯರು ಸಾಧು ಮರಕಾಲರವರನ್ನು ಪರೀಕ್ಷಿಸಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ಘಟನೆ ಸಂಬಂಧ ಮೃತರ ಸೊಸೆ ಸುಹಾಸಿನಿ ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!