March 18, 2026

ಸುಳ್ಯ: ವಿದ್ಯುತ್ ಶಾಕ್‌ ಹೊಡೆದು‌ ಮಹಿಳೆ ಮೃತ್ಯು

0
IMG-20231008-WA0004.jpg



ಸುಳ್ಯ: ಮನೆಯಲ್ಲಿ ಇನ್ವರ್ಟರ್ ಪ್ಲಗ್ ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನೆಲ್ಲೂರು ಕೆಮ್ರಾಜೆ‌ ಗ್ರಾಮದ ಬೊಮ್ಮಾರಿನಿಂದ‌ ವರದಿಯಾಗಿದೆ.

ಬೊಮ್ಮಾರು ಬಾಬು ಕುಲಾಲ್ ಎಂಬವರ ಪತ್ನಿ ಲಲಿತಾ(55 ಪ್ರಾಯ) ಎಂಬವರೇ ಮೃತ ಪಟ್ಟ ಮಹಿಳೆಯಾಗಿದ್ದಾರೆ.

ಲಲಿತಾರವರು ದಿನಂಪ್ರತಿ ಮಲಗುವ ಸಮಯದಲ್ಲಿ‌ ಇನ್ವರ್ಟರ್ ಗೆ ವಿದ್ಯುತ್ ಸಂಪರ್ಕಿಸುವ ಪ್ಲಗ್ ಅನ್ನು ತೆಗೆದು ಮಲಗುತ್ತಿದ್ದರೆನ್ನಲಾಗಿದೆ. ನಿನ್ನೆ ರಾತ್ರಿಯೂ ಸುಮಾರು 10 ಗಂಟೆಯ ವೇಳೆಗೆ ಪ್ಲಗ್ ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತದರೂ ಅಷ್ಟಾಗಲೇ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.

ಮೃತರು ಪತಿ, ಇಬ್ಬರು ಪುತ್ರರಾದ ಗೌತಮ್, ಅಖಿಲ್ ಹಾಗೂ ಬಂಧುಗಳನ್ನು‌ ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!