March 18, 2026

ಮಂಗಳೂರು: ಟಿಪ್ಪರ್‌ – ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

0
image_editor_output_image-311452794-1696747499750.jpg



ಮಂಗಳೂರು: ಬಜ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ಮುಚ್ಚೂರು ಬಳಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.

ಗುರುಪುರ ಹೊಸಮನೆ ನಿವಾಸಿ ಸಚಿನ್ ಕುಮಾರ್ ಆಚಾರ್ಯ (33) ಸ್ಥಳದಲ್ಲೇ ಮೃತಪಟ್ಟವರು.

ಸಚಿನ್ ಅವರು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್ ಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ.

ಇನ್ನು ಸಚಿನ್ ಪೋಷಕರು, ಒಬ್ಬ ಸಹೋದರ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಘಟನೆ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!