ಗಲ್ಫ್ ನಿಂದ ಅಕ್ರಮವಾಗಿ ಚಿನ್ನ ಸಾಗಟ: ಕಣ್ಣೂರು ವಿಮಾನ ನಿಲ್ದಾಣದಿಂದ ಓರ್ವ ವಶಕ್ಕೆ
ಕಾಸರಗೋಡು: ಗಲ್ಫ್ ನಿಂದ ಅಕ್ರಮವಾಗಿ ಚಿನ್ನ ಸಾಗಿಸಿದ್ದ ವ್ಯಕ್ತಿಯನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.
ಕುಂಬಳೆ ನಿವಾಸಿ ಸಲ್ಮಾನ್ ಫರೀದ್ ಆರೋಪಿಯಾಗಿದ್ದಾನೆ.
ಸುಮಾರು 87.75 ಲಕ್ಷ ರೂ. ಮೌಲ್ಯದ 1,517 ಗ್ರಾಂ ಚಿನ್ನಾಭರಣ ಸಹಿತ ಈತನನ್ನು ವಶಪಡಿಕೊಳ್ಳಲಾಗಿದೆ.
ಸಂಶಯ ಗೊಂಡು ಫರೀದ್ ನ ಬ್ಯಾಗನ್ನು ತಪಾಸಣೆ ನಡೆಸಿದಾಗ ಚಿನ್ನಾಭರಣ ಪತ್ತೆಯಾಗಿದೆ. ಟ್ರೋಲಿ ಬ್ಯಾಗ್ ನೊಳಗೆ ಬಚ್ಚಿಟ್ಟು ಈತ ಚಿನ್ನ ಸಾಗಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.


