September 20, 2024

ವಲಯ ಮಟ್ಟದ ಕ್ರೀಡಾಕೂಟ: ಪುತ್ತೂರು ಬೆಥನಿ ಶಾಲಾ ವಿದ್ಯಾರ್ಥಿ ಚಾಂಪಿಯನ್

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಪುತ್ತೂರು ನಗರ ವಲಯ ಮಟ್ಟದ ಕ್ರೀಡಾಕೂಟ ಸಮಿತಿ ಹಾಗೂ ದ. ಕ ಜಿ ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುಡಿಪಾಡಿ ಇದರ ಆಶ್ರಯದಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು ಇಲ್ಲಿಯ ಮೊಹಮ್ಮದ್ ಶಾಜದ್ ಉದ್ದಜಿಗಿತ ದಲ್ಲಿ ಪ್ರಥಮ ಹಾಗೂ ಏತ್ತರ ಜಿಗಿತ ದಲ್ಲೂ ಪ್ರಥಮ ಸ್ಥಾನವನ್ನು ಪಡೆದು ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿ ಬಂದಿರುತ್ತಾರೆ.

ಹಾಗೆಯೇ ಶಾನ್ ಮಾಡ್ತಾ ಇವರು ಗುಂಡು ಎಸೆತದಲ್ಲಿ ತೃತೀಯ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆಡದಿರುತ್ತಾರೆ ಹಾಗೆಯೇ ಬಾಲಕಿಯ ವಿಭಾಗದಲ್ಲಿ ಆಯಿಷಾ ಹಿಬಾ ಇವರು ಗುಂಡು ಎಸೆತ ದಲ್ಲಿ ದ್ವಿತೀಯ ಮತ್ತು ಚಕ್ರ ಎಸೆತ ದಲ್ಲಿ ದ್ವಿತೀಯ ಸ್ಥಾನ ವನ್ನು ಪಡೆದಿದ್ದು, ಇವರೆಲ್ಲರೂ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!