May 13, 2026

ಕಾರ್ಕಳ: ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

0
image_editor_output_image1153907385-1696407081216.jpg

ಕಾರ್ಕಳ: ಉಡುಪಿಯ ಕಾರ್ಕಳದಲ್ಲಿ ಕಳೆದ ಐದು ದಿನಗಳ ಹಿಂದೆ ನಾಪತ್ತೆಯಾದ ವ್ಯಕ್ತಿಯೋರ್ವರು ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ಕಾರ್ಕಳದ ದುರ್ಗ ಗ್ರಾಮದ ನಿವಾಸಿಯಾಗಿರುವ ಸಂದೇಶ್ ಶೆಟ್ಟಿ ಎಂಬವರು ಶವವಾಗಿ ಪತ್ತೆಯಾದ ದುರ್ದೈವಿಯಾಗಿದ್ದಾರೆ.

ಸಂದೇಶ್ ಶೆಟ್ಟಿಯವರು ನಾಪತ್ತೆಯಾದ ದಿನವೇ ಅವರು ದುರ್ಗ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ‌.

ಭಾರೀ ಮಳೆಯ ಹಿನ್ನೆಲೆಯಲ್ಲಿ ಅವರ ಶವ ತೇಲಿಕೊಂಡು ಬಂದು ಕಾವೇರಡ್ಕ ಎಂಬಲ್ಲಿನ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸ್ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

error: Content is protected !!