ಮಂಗಳೂರು: ವೃದ್ಧ ಸಹೋದರಿಯರಿಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮಂಗಳೂರು: ಕದ್ರಿ ಕಂಬಳದಲ್ಲಿರುವ ತಮ್ಮ ನಿವಾಸದಲ್ಲಿ ಇಬ್ಬರು ವೃದ್ಧೆಯರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಂಗಳವಾರ ಅಕ್ಟೋಬರ್ 3 ರಂದು ನಡೆದಿದೆ.
ಮೃತರನ್ನು 70 ವರ್ಷ ವಯಸ್ಸಿನ ಲತಾ ಭಂಡಾರಿ ಮತ್ತು ಅವರ ಸಹೋದರಿ ಸುಂದರಿ ಶೆಟ್ಟಿ (80) ಎಂದು ಗುರುತಿಸಲಾಗಿದೆ.ಲತಾ ಭಂಡಾರಿಯವರ ಪತಿ ಜಗನಾಥ ಭಂಡಾರಿ ಎಂದಿನಂತೆ ಯಶರಾಜ್ ಬಾರ್‌ಗೆ ಕೆಲಸಕ್ಕೆ ಹೋಗಿದ್ದರು.
4:30 ಕ್ಕೆ ಮನೆಗೆ ಹಿಂದಿರುಗಿದಾಗ ಬಾಗಿಲು ಬಂದಾಗಿದ್ದು, ಕಿಟಕಿಯಿಂದ ನೋಡಿದಾಗ ತಮ್ಮ ಹೆಂಡತಿ ಮತ್ತು ಅತ್ತಿಗೆ ನೇಣು ಬಿಗಿದುಕೊಂಡಿದ್ದಾರೆ. ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆಗೆಕಾರಣವಾಗಿದೆ ಎನ್ನಲಾಗಿದೆ.”


