September 25, 2026

ವಿಟ್ಲ: ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಕಾರ್ಮಿಕರಿಗೆ ಅನ್ಯಾಯ: ಕಾರ್ಮಿಕ ವಿರೋಧಿ ನೀತಿಯ ವಿರುದ್ದ ಪ್ರತಿಭಟನೆ

0
IMG-20231003-WA0012.jpg


ವಿಟ್ಲ: ಕಾರ್ಮಿಕರ ಕಷ್ಟಗಳನ್ನು ಅರಿತವರು ಮಾತ್ರ ಮಂಡಳಿಯಲ್ಲಿರಬೇಕು. ಕಾರ್ಮಿಕ ಮಂಡಳಿಯ ತಪ್ಪು ನೀತಿಗಳಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಮಿಕರಿಗೆ ನೀಡಿದ ಸವಲತ್ತು ತೆಗೆದು ಹಾಕಲಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಮನವಿಗಳಿಗೆ ಮನ್ನಣೆ ಸಿಗದ ಕಾರಣ ಬೀದಿಗೆ ಇಳಿಯಲಾಗಿದೆ. ಕಟ್ಟಡ ಕಾರ್ಮಿಕರು ಮಾರ್ಗಕ್ಕೆ ಇಳಿದು ಪ್ರತಿಭಟನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಬಿ. ಎಂ. ಎಸ್. ನಿಕಟಪೂರ್ವ ರಾಜ್ಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ತಿಳಿಸಿದರು.


ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಭಾರತೀಯ ಮಜ್ದೂರ್ ಸಂಘ ವಿಟ್ಲ ತಾಲೂಕು ಸಮಿತಿ ವತಿಯಿಂದ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಯಿತು.
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ವಿಟ್ಲ ನಾಡಕಛೇರಿಯವರೆಗೆ ಕಾಲುನಡಿಗೆ ಜಾಥಾ ನಡೆಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ, ವಿಟ್ಲ ಘಟಕ ಅಧ್ಯಕ್ಷ ನಾಗೇಶ್ ಸುವರ್ಣ, ಉಪಾಧ್ಯಕ್ಷ ಜಗದೀಶ್ ಅನ್ನಮೂಲೆ, ಕಾರ್ಯದರ್ಶಿ ಸಂತೋಷ್ ಕೆಲಿಂಜ, ಜತೆ ಕಾರ್ಯದರ್ಶಿ ಯಶೋಧರ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

You may have missed

error: Content is protected !!