September 26, 2026

ಉಡುಪಿ: ಮನೆ ಮುಂದೆ ನಿಲ್ಲಿಸಿದ ಆಟೋಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

0
image_editor_output_image-172541461-1695737828100.jpg

ಉಡುಪಿ: ವ್ಯಕ್ತಿಯೋರ್ವ ನೆರೆಮನೆಗೆ ಕಲ್ಲೆಸೆದು ಮನೆ ಮುಂದೆ ನಿಲ್ಲಿಸಿದ್ದ ಆಟೋಗೆ ಬೆಂಕಿ ಹಚ್ಚಿದ ಘಟನೆ ಉಡುಪಿಯ ನಿಟ್ಟೂರು ಹನುಮಂತ ನಗರದಲ್ಲಿ ನಡೆದಿದೆ.

ಅತಿರೇಕದ ವರ್ತನೆ ಮಾಡಿದ ವ್ಯಕ್ತಿಯನ್ನು ಖಲೀಮ್ ಎಂದು ಗುರುತಿಸಲಾಗಿದೆ. ಆರೋಪಿ ಗಾಂಜಾ ಸೇವಿಸಿ ದಾಂಧಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ.

 

ದಿವಾಕರ ಬೆಲ್ಚಡ ಎಂಬವರಿಗೆ ಸೇರಿದ ಪ್ಯಾಸೆಂಜರ್ ರಿಕ್ಷಕ್ಕೆ ಖಲೀಮ್ ಬೆಂಕಿ ಹಚ್ಚಿದ್ದು, ಅವರ ಮನೆಯ ಮೇಲೆ ಕಲ್ಲು ಎಸೆದು ದಾಂಧಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ.

ಕಲ್ಲೆಸೆದ ಘಟನೆ ನಡೆದಾಗ ಸ್ಥಳಕ್ಕೆ ಉಡುಪಿ ಪೊಲೀಸ್ ರ ಬಂದು ವಾರ್ನಿಂಗ್ ನೀಡಿ ತೆರಳಿದ್ದರು. ಪೊಲೀಸರು ವಾಪಾಸ್ ತೆರಳಿದ ಬಳಿಕ ಮನೆ ಎದುರು ನಿಂತಿದ್ದ ರಿಕ್ಷಾಕ್ಕೆ ಡೀಸೆಲ್ ಹಾಕಿ ಖಲೀಮ್ ಬೆಂಕಿ ಹಚ್ಚಿದ್ದಾನೆ. ಸ್ಥಳೀಯರು ನೀರು ಹಾಕುವಷ್ಟರಲ್ಲಿ ರಿಕ್ಷಾ ಬೆಂಕಿಗೆ ಅಹುತಿಯಾಗಿದೆ. ಉಡುಪಿ ನಗರ ಠಾಣೆಯಲ್ಲಿ ಖಲೀಮ್ ವಿರುದ್ಧ ಪ್ರಕರಣ ದಾಖಲಾಗಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!