February 3, 2026

ಉದ್ಯಮಿ ಗೋವಿಂದ್ ಬಾಬುಗೆ ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಕಾರು ಬಾಗಲಕೋಟೆಯಲ್ಲಿ ಪತ್ತೆ

0
image_editor_output_image-792467445-1694955811586.jpg



ಬಾಗಲಕೋಟೆ: ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಎನ್ನುವರಿಗೆ ಕೋಟ್ಯಂತರ ರೂಪಾಯಿ ಪಡೆದುಕೊಂಡು ಚೈತ್ರಾ ಕುಂದಾಪುರ ಸೇರಿದಂತೆ ಆಕೆಯ ಗ್ಯಾಂಗ್ ವಂಚನೆ ಮಾಡಿದೆ. ಉದ್ಯಮಿಯಿಂದ ಕಿತ್ತುಕೊಂಡ ಕೋಟ್ಯಾಂತರ ರೂಪಾಯಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೈಫೈ ಜೀವನ ಆರಂಭಿಸಿದ್ದಾರೆ. ಅಲ್ಲದೇ ಅದೇ ದುಡ್ಡಿನಲ್ಲಿ ಚೈತ್ರಾ ಕಿಯಾ ಕಂಪನಿಯ ಕಾರು ಖರೀದಿಸಿದ್ದು, ಇದೀಗ ಆ ಕಾರು ಬಾಗಲಕೋಟೆಯಲ್ಲಿ ಪತ್ತೆಯಾಗಿದೆ.

ಉದ್ಯಮಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ 5 ಕೋಟಿ ಹಣ ಪಡೆದು ವಂಚನೆ ಕೇಸ್ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಕಾರು ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಪತ್ತೆಯಾಗಿದೆ.

ಬಾಗಲಕೋಟೆ ಜಿಲ್ಲೆ ಮುಧೋಳದ ಹಿಂದೂ ಕಾರ್ಯಕರ್ತ ಕಿರಣ್ ಗಣಪ್ಪಗೋಳ ಮನೆಯಲ್ಲಿ ಚೈತ್ರಾ ಕುಂದಾಪುರಗೆ ಸೇರಿದ ಕಿಯಾ ಕಾರು ಸಿಕ್ಕಿದೆ.

ಚೈತ್ರಾ ಕುಂದಾಪುರಗೆ ಸೇರಿದ KA 20 ME 7253 ನಂಬರ್ನ ಕಿಯಾ ಕಾರನ್ನು ಕಿರಣ್, ಸೆಪ್ಟೆಂಬರ್ 9ರಂದು ತಂದು ತನ್ನ ಬಳಿ ಇಟ್ಟುಕೊಂಡಿದ್ದ.

ಮುಧೋಳ‌ದಲ್ಲಿ ಡ್ರೈವಿಂಗ್ ಸ್ಕೂಲ್‌ ಹೊಂದಿರುವ ಕಿರಣ್ ಗಣಪ್ಪಗೋಳ, ಈ ಹಿಂದೆ ಮುಧೋಳ ಕಾರ್ಯಕ್ರಮಕ್ಕೆ ಬಂದಿದ್ದ ಚೈತ್ರಾ ಕುಂದಾಪುರ ಪರಿಚಯವಾಗಿತ್ತು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!