July 4, 2026

ಉಡುಪಿ: ಮುಂಬೈನಿಂದ ಊರಿಗೆ ಬಂದು ವ್ಯಕ್ತಿ ನೇಣಿಗೆ ಶರಣು
 

0
sui_090923_1.jpg


ಉಡುಪಿ: ಮುಂಬೈನಿಂದ ಊರಿಗೆ ಬಂದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಂಬಾಗಿಲು ಪೆರಂಪಳ್ಳಿ ಕಕ್ಕಿಂಜೆಯ ದೇವಿನಗರದ ಬಳಿ ನಡೆದಿದೆ.

ಮುಂಬೈನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಕೇಶ್ ಶೆಟ್ಟಿ (51) ಎಂದು ಗುರುತಿಸಲಾಗಿದೆ.

ಮುಂಬೈಯಿಂದ ಬಂದು ರಾತ್ರಿ ಹೊತ್ತಿನಲ್ಲಿಮನೆಯ ಹೊರಗಡೆ ಇರುವ ಬಟ್ಟೆ ಒಗೆಯುವ ಸ್ಥಳದಲ್ಲಿ ಕಬ್ಬಿಣದ ಪೈಪಿಗೆ ನೈಲಾನ್ ಹಗ್ಗ ಕಟ್ಟಿ ನೇಣು ಬಿಗಿದುಕೊಂಡುಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತರಾಗಿದ್ದ ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

 ಉಡುಪಿ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!