ಜ್ಯೂಸ್ ಎಂದು ಮನೆಯಲ್ಲಿದ್ದ ಕೀಟನಾಶಕ ಕುಡಿದು ಮಗು ಮೃತ್ಯು

ರಾಮನಗರ: ಜ್ಯೂಸ್ ಎಂದು ಮನೆಯಲ್ಲಿದ್ದ ಕೀಟನಾಶಕ ಕುಡಿದು ಪುಟ್ಟ ಕಂದಮ್ಮವೊಂದು ಮೃತಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಪುಷ್ಪ ಹಾಗೂ ಹನುಮಂತು ಎಂಬವರ ಪುತ್ರ ಎರಡು ವರ್ಷದ ಯಶ್ವಿಕ್ (2) ಕೀಟ ನಾಶಕ ಸೇವಿಸಿ ಮೃತಪಟ್ಟ ಮಗು.
ಜಮೀನಿಗೆ ಸಿಂಪಡಿಸಿ ಉಳಿದಿದ್ದ ಕೀಟನಾಶಕವನ್ನ ಹನುಮಂತು ಮನೆಯಲ್ಲಿ ಇಟ್ಟಿದ್ದರು. ಈ ವೇಳೆ ಮಗು ಆಟವಾಡುವಾಗ ಕೀಟನಾಶಕದ ಬಾಟೆಲ್ ನೋಡಿ ಜ್ಯೂಸ್ ಎಂದು ಭಾವಿಸಿ ಕುಡಿದಿದೆ.