February 4, 2026

ಕಾಸರಗೋಡು: ಸ್ಕೂಲ್ ಬಸ್ ಹರಿದು 4 ವರ್ಷದ ಬಾಲಕಿ ಮೃತ್ಯು

0
image_editor_output_image-1565418994-1692889364548.jpg


 
ಕಾಸರಗೋಡು: ಶಾಲಾ ವಾಹನದಡಿಗೆ ಬಿದ್ದು ನರ್ಸರಿ ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಕಂಬಾರ್ ಸಿರಿಬಾಗಿಲು ಎಂಬಲ್ಲಿ ನಡೆದಿದೆ.

ಸಿರಿಬಾಗಿಲಿನ ಮುಹಮ್ಮದ್ ಸುಬೈರ್ ರವರ ಪುತ್ರಿ ಆಯಿಷಾ ಸೆಯಾ (4) ಮೃತ ಪಟ್ಟವಳು.

ಮನೆ ಸಮೀಪ ಈ ದುರಂತ ನಡೆದಿದೆ ಶಾಲೆ ಬಿಟ್ಟು ಮನೆ ಬಳಿ ಬಾಲಕಿಯನ್ನು ಇಳಿಸಿ ಬಸ್ಸನ್ನು ಹಿಂದಕ್ಕೆ ತೆಗೆಯು ತ್ತಿದ್ದಾ ಗ ಅದೇ ಬಸ್ಸಿನಡಿ ಸಿಲುಕಿ ಈ ಘಟನೆ ನಡೆದಿದೆ. ಸ್ಥಳೀಯರು ಧಾವಿಸಿ ಬಂದು ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದಳು. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಬಾಲಕಿ ನೆಲ್ಲಿಕುಂಜೆ ಖಾಸಗಿ ಶಾಲೆಯ ನರ್ಸರಿ ವಿದ್ಯಾರ್ಥಿನಿಯಾಗಿದ್ದಳು.

Leave a Reply

Your email address will not be published. Required fields are marked *

You may have missed

error: Content is protected !!