ಕಾಸರಗೋಡು: ಕೊಲೆ ಸೇರಿದಂತೆ ಹಲವು ಪ್ರಕರಣಗಳ ಆರೋಪಿ ಪೊಲೀಸರ ವಶಕ್ಕೆ
ಕಾಸರಗೋಡು: ಕೊಲೆ ಸೇರಿದಂತೆ ಹಲವು ಪ್ರಕರಣಗಳ ಆರೋಪಿಯೋರ್ವ ನನ್ನು ಕಾಫಾ ಕಾಯ್ದೆಯಂತೆ ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂದ್ಯೋಡು ಅಡ್ಕ ಬೈದಳದ ಅಬ್ದುಲ್ ಲತೀಫ್(35) ಬಂಧಿತ ಆರೋಪಿ.
ಈತನ ಸಹಚರ ರಾಗಿದ್ದ ಮೀಯಪದವಿನ ರಹೀಮ್ ಮತ್ತು ಲತೀಫ್ ನನ್ನು ಒಂದು ತಿಂಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಐದು ವರ್ಷದ ಹಿಂದೆ ಉಪ್ಪಳ ಸೋಂಕಾಲ್ ಪುಳಿಕುತ್ತಿಯ ಪೈಂಟಿಂಗ್ ಕಾರ್ಮಿಕ ಅಲ್ತಾಫ್ ನನ್ನು ಉಪ್ಪಳದಿಂದ ಅಪಹರಿಸಿ ಕರ್ನಾಟಕದ ನಿರ್ಜನ ಪ್ರದೇಶದಲ್ಲಿ ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದಾನೆ. ರಿವಾಲ್ವಾರ್ ತೋರಿಸಿ ದರೋಡೆ, ಬೆದರಿಕೆ, ಅಪಹರಣ ಸೇರಿದಂತೆ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾನೆ. ಈತನ ಇನ್ನೋರ್ವ ಸಹಚರ ಪಚ್ಚಂಬಳದ ಇರ್ಷಾದ್’ನನ್ನು ಒಂದು ವಾರದ ಹಿಂದೆ ಕುಂಬಳೆ ಪೊಲೀಸರು ಬಂಧಿಸಿದ್ದರು.


