February 3, 2026

ಅನಧಿಕೃತವಾಗಿ ಒಮ್ನಿ ಕಾರುಗಳಲ್ಲಿ ಶಾಲಾ ಮಕ್ಕಳ ಸಾಗಾಟ: 15ಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆದ RTO

0
image_editor_output_image-623695660-1692684168428.jpg

ಬೆಂಗಳೂರು: ಅನಧಿಕೃತವಾಗಿ ಒಮ್ನಿ ಕಾರುಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಹಿನ್ನೆಲೆ ಬೆಂಗಳೂರಿನಲ್ಲಿ RTO ಅಧಿಕಾರಿಗಳು 15ಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ವೈಟ್ಬೋರ್ಡ್ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವ ಕುರಿತು ದೂರು ಬಂದ ಹಿನ್ನೆಲೆ ಇಂದು ಶಾಲಾ ವಾಹನಗಳನ್ನ ತಡೆದು RTO ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ಅನಧಿಕೃತವಾಗಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಹಿನ್ನೆಲೆ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು ಘಟನೆ ಸಂಬಂಧ ಆರ್ಟಿಓ ಜಂಟಿ ಆಯುಕ್ತೆ ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ. ಶಾಲಾ ಮಕ್ಕಳ ಸುರಕ್ಷತೆ, ಸಂಚಾರ ಬಗ್ಗೆ ಕಾರ್ಯಾಚರಣೆ ಮಾಡಲಾಗ್ತಿದೆ. ಸುರಕ್ಷತೆ ಇಲ್ಲದ ವಾಹನಗಳಲ್ಲಿ ಮಕ್ಕಳನ್ನ ಕರೆದೊಯ್ಯಲು ಅವಕಾಶ ಇಲ್ಲ. ಅದಕ್ಕೆ ರೇಡ್ ಮಾಡಿ ಅನಧಿಕೃತ ವಾಹನಗಳನ್ನ ಸೀಜ್ ಮಾಡಿದ್ದೇವೆ.

ಮಕ್ಕಳ ಸುರಕ್ಷತೆ ವಿಚಾರವಾಗಿ ಕೆಲ ಕ್ರಮ ಕೈಗೊಳ್ಳಬೇಕು. ದಾಖಲಾತಿ ನಿರ್ವಹಣೆ ಸರಿಯಾಗಿ ಮಾಡಿಲ್ಲ. ಟ್ಯಾಕ್ಸ್ ಕಟ್ಟಿಲ್ಲ. ಶಾಲಾ ಮಕ್ಕಳನ್ನ ಪಿಕ್ ಮಾಡಲು ಹಾಗೂ ಡ್ರಾಪ್ ಮಾಡಲು ಕೆಲವು ಸೂಚನೆಗಳಿವೆ. ಅವೆಲ್ಲವನ್ನ ಉಲ್ಲಂಘನೆ ಮಾಡಲಾಗಿದೆ. ವಾಹನಕ್ಕೆ FC ಇಲ್ಲ,

ಪರ್ಮಿಟ್ ಇಲ್ಲ ಆದರೂ ಇವ್ರು ಮಕ್ಕಳನ್ನ ಕರೆದೊಯ್ತಿದ್ರು. ಸಾರಿಗೇತರ ವಾಹನಗಳನ್ನು ಅನಧಿಕೃತವಾಗಿ ಬಳಸಿದ್ದಾರೆ. ಪೋಷಕರು ಕೂಡ ಈ ಬಗ್ಗೆ ಗಮನವಹಿಸಬೇಕು ಎಂದರು.

Leave a Reply

Your email address will not be published. Required fields are marked *

You may have missed

error: Content is protected !!