March 18, 2026

ಬಿಜೆಪಿ ಮುಖಂಡನಿಂದ ಚಾಕು ಇರಿತ

0
image_editor_output_image-119704141-1692616696642.jpg

ಬೆಂಗಳೂರು: ತಾನೇ ಬೆಳಸಿದ್ದ ಶಿಷ್ಯನ ಮೇಲೆ ರಾಜಕೀಯ ನಾಯಕನೊಬ್ಬ ಹಗೆತನ ಸಾಧಿಸಿ ಚಾಕು ಇರಿದ ಘಟನೆ ನಗರದಲ್ಲಿ ನಡೆದಿದೆ.

ಮಾತುಕತೆಗೆ ಎಂದು ಕರೆದು ಚಾಕು ಇರಿದು ಮಾಜಿ ಕಾರ್ಪೋರೇಟರ್ ತಲೆ ಮರೆಸಿಕೊಂಡಿದ್ದಾನೆ. ಬಿಜೆಪಿಯ ಮುಖಂಡ ಬಿನ್ನಿಪೇಟೆ ವಾರ್ಡ್‍ನ ಮಾಜಿ ಕಾರ್ಪೋರೇಟರ್ ಬಿಟಿಎಸ್ ನಾಗರಾಜ್ ಎಂಬಾತ ಬಾಬು ಎಂಬುವವರಿಗೆ ಚಾಕು ಇರಿದಿದ್ದಾನೆ.

ರಾಜಾಜಿನಗರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ರೆಂಡ್ಸ್ ಕ್ಲಬ್ ಬಳಿ ಬಾಬು ಅವರನ್ನು ಕರೆಸಿಕೊಂಡು ಕೃತ್ಯ ಎಸಗಲಾಗಿದೆ. ಬಟನ್ ಚಾಕುವಿನಿಂದ ಹೊಟ್ಟೆಗೆ ಇರಿಯಲಾಗಿದ್ದು ಬಾಬು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!