March 19, 2026

ಕಾಸರಗೋಡು: ಬೈಕ್-ಮಿನಿ ಲಾರಿ ನಡುವೆ ಅಪಘಾತ: ಮೊಗ್ರಾಲ್ ಪುತ್ತೂರಿನ ಇಬ್ಬರು ಯುವಕರು ಮೃತ್ಯು

0
IMG-20230820-WA0016.jpg

ಕಾಸರಗೋಡು: ಬೈಕ್ ಹಾಗೂ ಮಿನಿ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೊಗ್ರಾಲ್ ಪುತ್ತೂರಿನ ಇಬ್ಬರು ಯುವಕರು ಮೃತಪಟ್ಟ ಘಟನೆ ಇಂದು ಮುಂಜಾನೆ ಕಣ್ಣೂರು ಬಳಿ ನಡೆದಿದೆ.

ಮೊಗ್ರಾಲ್ ಪುತ್ತೂರು ಕಂಬಾರ್ ಬೆದ್ರಡ್ಕ ನಿವಾಸಿ ಮುನಾಫ್ (24) ಹಾಗೂ ಅವರ ಸ್ನೇಹಿತ ಲತೀಫ್ (23) ಮೃತಪಟ್ಟವರು. ಕಣ್ಣೂರಿನಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಮಂಗಳೂರಿನಿಂದ ಕಣ್ಣೂರು ಕಡೆಗೆ ತೆರಳುತ್ತಿದ್ದ ಮಿನಿ ಲಾರಿ ನಡುವೆ ಕಣ್ಣೂರು ಎ.ಕೆ.ಜಿ. ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!